ಅಷ್ಠಮಠದ ಮೂರು ಸ್ವಾಮೀಜಿಗಳ ವಿಚಾರಣೆ ನಡೆಸಿದ ಪೋಲಿಸರು
ಅಷ್ಠಮಠದ ಮೂರು ಸ್ವಾಮೀಜಿಗಳ ವಿಚಾರಣೆ ನಡೆಸಿದ ಪೋಲಿಸರು
ಉಡುಪಿ: ಅಷ್ಠಮಠದ ಯತಿಗಳಲ್ಲಿ ಒಂದಾದ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಅಸಹಜ ಸಾವಿನ ಕುರಿತು ಹಿರಿಯಡಕ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ತಕ್ಷಣ ಪೋಲೀಸರು ತನಿಖೆಯನ್ನ ಕೈಗೊಂಡಿದ್ದಾರೆ.
ಇಂದು ಶೀರೂರು ಮೂಲಮಠದಲ್ಲಿ ಶಿರೂರು ಶ್ರೀಗಳ ಅಂತ್ಯಸಂಸ್ಕಾರ ಮುಗಿದ ತಕ್ಷಣ ಪೋಲಿಸರು ಅದಮಾರು,ಕಾಣಿಯೂರು,ಮತ್ತು ಸೋದೆ ಮಠಾಧೀಶರನ್ನ ಒಂದು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಪೋಲಿಸರ ತನಿಖಾ ಪ್ರಶ್ನೆಗಳಿಗೆ ಮೂರು ಸ್ವಾಮೀಜಿಿಿ ಉತ್ತರಿಸಲು ತಡಬಡಾಯಿಸಿದ್ದಾರೆಂದು ತಿಳಿದು ಬಂದಿದೆ.
ಆದರೇ ತನಿಖೆಯಲ್ಲಿ ಯಾವೆಲ್ಲ ಪ್ರಶ್ನೆಗಳು ಬಂದಿದೆಂಬ ಮಾಹಿತಿ ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಶ್ರೀಗಳ ಮರಣ ರಹಸ್ಯ ತನಿಖೆಯ ಬಳಿಕವಷ್ಟೆ ಸತ್ಯ ಹೊರ ಬೀಳಬೇಕಾಗಿದೆ.
