ಆಂಧ್ರ ಪ್ರದೇಶ; ಗುಂಟೂರಿನ ಜಿನ್ನಾ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ – Vishwanews24

Featured, ರಾಷ್ಟ್ರ ನ್ಯೂಸ್

ಆಂಧ್ರ ಪ್ರದೇಶ; ಗುಂಟೂರಿನ ಜಿನ್ನಾ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ – Vishwanews24

ಹೈದರಾಬಾದ್ : ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್ ವಿವಾದದ ನಡುವೆಯೇ ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್ ಗೆ ತ್ರಿವರ್ಣ ಬಣ್ಣ ಬಳಿಯಲಾಗಿದೆ. ಇಲ್ಲಿ ಶೀಘ್ರದಲ್ಲೇ ರಾಷ್ಟ್ರಧ್ವಜ ಹಾರಿಸಲಾಗುವುದು. ಜನವರಿಯಲ್ಲಿ ಕೆಲವರು ಜಿನ್ನಾ ಟವರ್ ಗೆ ಪ್ರವೇಶಿಸಿದ್ದರು. ಬಳಿಕ ಇಲ್ಲಿ ತ್ರಿವರ್ಣ ಧ್ವಜ ಹಾರಿಸಿದ ವಿಚಾರ ಕಾವು ಪಡೆದಿತ್ತು. ಗುಂಟೂರಿನ ಮಾಜಿ ಶಾಸಕ ಮೊಹಮ್ಮದ್ ಮುಸ್ತಫಾ ಇದಕ್ಕೆ ತ್ರಿವರ್ಣ ಧ್ವಜದ ಬಣ್ಣ ಬಳಿದಿದ್ದರು. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಮುಂದೆ ಬಂದಿದ್ದವು ಹೀಗಾಗಿ ಗೋಪುರಕ್ಕೆ ಬಣ್ಣ ಬಳಿಯಲು ನಿರ್ಧರಿಸಲಾಯಿತು. ತ್ರಿವರ್ಣ ಧ್ವಜದ ಬಣ್ಣದಿಂದ ಸಿಂಗರಿಸಿ, ಈ ಗೋಪುರದ ಮೇಲೆ ಕಂಬವನ್ನು ಸ್ಥಾಪಿಸಲಾಗಿದೆ, ಫೆಬ್ರವರಿ 3 ರಂದು ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.

ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಕೆಲವರು ಜಿನ್ನಾ ಗೋಪುರವನ್ನು ಪ್ರವೇಶಿಸಿದ್ದರು. ಆದರೆ, ವಿವಾದ ತಡೆಯಲು ಪೊಲೀಸರು ಅವರನ್ನು ಬಂಧಿಸಿದ್ದರು. ಬಿಜೆಪಿಯ ಆಂಧ್ರಪ್ರದೇಶ ಘಟಕವು ಈ ಬಗ್ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಗುಂಟೂರು ಮಹಾನಗರ ಪಾಲಿಕೆ ಆಯುಕ್ತ ಚಲ್ಲಾ ಅನುರಾಧ ಅವರಿಗೆ ಮನವಿ ಸಲ್ಲಿಸಿತ್ತು. ಇದರಲ್ಲಿ ಗೋಪುರಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೆಸರಿಡಬೇಕು ಎಂಬ ಆಗ್ರಹ ಕೇಳಿಬಂದಿತ್ತು.

ಇದನ್ನೂ ಓದಿ :

ಹೆಣ್ಣು ಮಕ್ಕಳು ಕೇವಲ ಆಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಬದಲಾಗಿ ರಾಷ್ಟ್ರ ಮತ್ತು ಸಾರ್ವಜನಿಕರ ರಕ್ಷಣೆಗೂ ಸಹ ಬದ್ದ ಎಂದು ನಿರೂಪಿಸಿದ್ದಾರೆ : ಅರಗ ಜ್ಞಾನೇಂದ್ರ – Vishwanews24

Leave a Reply