ಮಲ್ಪೆ: ಕರಾವಳಿಯ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣ ಮಲ್ಪೆ ಸೈಂಟ್‌ಮೇರಿಸ್ ದ್ವೀಪಕ್ಕೆ ಸ್ಪೀಡ್‌ಬೋಟ್ ಸೇವೆ ಸೆ. 15ರಿಂದ ಆರಂಭಗೊಂಡಿದೆ. ಇದು ಮಲ್ಪೆ ಬೀಚ್‌ನಿಂದ ಹೊರಡಲಿದ್ದು ಕೇವಲ 15ನಿಮಿಷಗಳಲ್ಲಿ ತಲುಪಲು ಸಾಧ್ಯವಾಗಲಿದೆ.
ಜೈ ಹನುಮಾನ್, ಜ್ಞಾನಜ್ಯೋತಿ, ಸೀಬರ್ಡ್ ಮತ್ತು ಇಂಡಿಯನ್ ಒಟ್ಟು 4 ಸ್ಪೀಡ್ ಬೋಟ್‌ಗಳು ಸೇವೆಗೆ ಇದೆ. ಒಂದು ಬೋಟಿನಲ್ಲಿ ಚಾಲಕರು,ನಿರ್ವಾಹಕರು ಸೇರಿದಂತೆ 14 ಮಂದಿಗೆ ಮಾತ್ರ ತೆರಳಲು ಅವಕಾಶ ವಿದ್ದು, ಯಾನಕ್ಕಾಗಿ ಕಾಯುವ ಪ್ರಮೇಯ ಇರುವುದಿಲ್ಲ. ಮಾತ್ರವಲ್ಲದೆ ದ್ವೀಪದಲ್ಲೂ ಹೆಚ್ಚು ಹೊತ್ತು ಸುತ್ತಾಡಿ ಕಾಲ ಕಳೆಯುವ ಅವಕಾಶ ನೀಡ ಲಾಗುತ್ತದೆ.
ಬೋಟ್‌ಗಳು ಅತ್ಯಾಧುನಿಕ ಸೌಕರ್ಯ ಹೊಂದಿದ್ದು, ಪ್ರತಿ ಬೋಟಿನಲ್ಲಿ ಇಬ್ಬರು ನುರಿತ ಈಜುಗಾರರು, ಲೈಫ್‌ಬಾಯ್, ಲೈಫ್ ಜಾಕೆಟ್ ಸಹಿತ ಸುರಕ್ಷಿತ ಸಾಧನಗಳು ಪ್ರಯಾಣಿಕರಿಗೆ ಲಭಿಸಲಿದೆ.
ಸದ್ಯ ಆರಂಭಗೊಂಡ ಬೀಚ್ ಸ್ಪೀಡ್ ಬೋಟ್‌ಗಳಲ್ಲಿ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿದ್ದರೂ(ಕನಿಷ್ಠ 4 ಮಂದಿ) ಅವರನ್ನು ದ್ವೀಪಕ್ಕೆ ಕರೆದೊಯ್ಯಲಾಗುತ್ತದೆ. ಬೆಳಗ್ಗೆ 8ರಿಂದ ಸಾಯಂಕಾಲ 5.30 ಗಂಟೆವರೆಗೆ ಬೀಚ್ ಬೋಟುಗಳು ಕಾರ್ಯನಿರ್ವಹಿಸುತ್ತವೆೆ. ಈ ಬೋಟ್‌ನಲ್ಲಿ 12 ಪ್ರವಾಸಿಗರು ಕುಳಿತುಕೊಳ್ಳಬಹುದು. ಬೀಚ್‌ನಿಂದ ತೆರಳಲು 15 ನಿಮಿಷ ಅವಧಿ ಬೇಕಾಗುತ್ತದೆ, ಪ್ರವಾಸಿಗರಿಗೆ ಸಮಯದ ನಿರ್ಬಂಧವಿಲ್ಲ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…