ಬೆಂಗಳೂರು: ಭಯೋತ್ಪಾದನೆಯನ್ನೇ ಉಸಿರಾಡುತ್ತಿರುವ ಪಾಕಿಸ್ತಾನವನ್ನು ಸಾಕಿ, ಪೋಷಿಸಿರುವ ಕಾಂಗ್ರೆಸ್ ಪಕ್ಷದ ಮೈಗೆ ಜಮ್ಮು ಕಾಶ್ಮೀರದಲ್ಲಿ ಸತ್ತಿರುವ 42 ಸಾವಿರ ಜನರ ರಕ್ತ ಅಂಟಿಕೊಂಡಿದೆ. ಆ ಪಾಪದಿಂದ ಕಾಂಗ್ರೆಸ್ ಎಂದಿಗೂ ಮುಕ್ತಿ ಹೊಂದಲಾರದು ಎನ್ನುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಇಂದು ಹಿಂದುತ್ವದ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಜಮ್ಮು ಕಾಶ್ಮೀರದಲ್ಲಿ ಸಾವನ್ನಪ್ಪಿದ 42,000 ಸೈನಿಕರು, ಪೊಲೀಸರು, ನಾಗರಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಅವರನ್ನು ಕೊಂದ ರಕ್ತ ಕಾಂಗ್ರೆಸ್ ಮೈಗೆ ಅಂಟಿಕೊಂಡಿದೆ. ಅತ್ಯಂತ ಚಿಕ್ಕದಾಗಿರುವ ಪಾಕಿಸ್ತಾನವನ್ನು ಪೋಷಿಸಿ, ಬೆಳೆಸಿ ಕಾಂಗ್ರೆಸ್ ಮಾಡಿರುವ ಅನಾಹುತ ಎಷ್ಟೆಂಬುದರ ಅರಿವು ಯಾರಿಗಾದರೂ ಇದೆಯಾ?
ಇಡೀ ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕಿಸಿ, ಪೋಷಿಸಿದ ಕಾಂಗ್ರೆಸ್ ಅನ್ನು ಬಗ್ಗುಬಡಿದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದರಿಂದ ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ. ಈ ಸಭೆಯಲ್ಲಿದ್ದವರು ಪಾಕಿಸ್ತಾನದತ್ತ ತಿರುಗಿ ಮೂತ್ರ ವಿಸರ್ಜನೆ ಮಾಡಿದರೂ ಪಾಕ್ ಮುಳುಗಿ ಹೋಗುತ್ತದೆ. ಅಂತಹ ದೇಶ ನಮ್ಮ ದೇಶದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂದು ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ನಾನೇನು ರೇಪ್ ಮಾಡಲಿಲ್ಲ, ವಂಚನೆ ಮಾಡಲಿಲ್ಲ, ಇಸ್ಪೀಟ್ ಆಡಲಿಲ್ಲ, ಖೋಟಾ ನೋಡು ಪ್ರಿಂಟ್ ಮಾಡಲಿಲ್ಲ. ಹಿಂದುತ್ವ, ಗೋಮಾತೆ ಹೆಸರು ಹೇಳಿದ್ದಕ್ಕೆ ನಿರ್ಲಜ್ಜ ರಾಜಕಾರಣಿಗಳು ನನ್ನ ವಿರುದ್ಧ 106 ಕೇಸುಗಳನ್ನು ಹಾಕಿದ್ದಾರೆ. ಇನ್ನೂ ಸಾವಿರಾರು ಕೇಸುಗಳನ್ನು ಹಾಕಿದರೂ ನನ್ನ ಹಿಂದುತ್ವದ ಧ್ವನಿಯನ್ನು ಯಾರಪ್ಪನಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಮುತಾಲಿಕ್ ಗುಡುಗಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…