ಆದಷ್ಟು ಬೇಗ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು : ಮಮತಾ ಬ್ಯಾನರ್ಜಿ -Vishwanews24
ಕೋಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಎಲೆಕ್ಷನ್ಗೆ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯಾದ್ಯಂತ ಸಾರ್ವಜನಿಕರನ್ನ ಸಂಪರ್ಕಿಸಲು ಕಳೆದ ತಿಂಗಳು ಆಯೋಜಿಸಿದ್ದ ‘ದೀದಿ ಕೆ ಬೋಲೋ’ ಕಾರ್ಯಕ್ರಮಕ್ಕೆ ಬಂಗಾಳಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಅಂತ ಮಮತಾ ಬ್ಯಾನರ್ಜಿ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿ, ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನರು ದೀದಿ ಕೆ ಬೋಲೋ ಕಾರ್ಯಕ್ರಮಕ್ಕೆ ಉತ್ತಮವಾಗಿ ಸ್ಪಂದಿಸಿದ್ದಕ್ಕೆ ನಾನು ನಿಮ್ಮನ್ನು ಸಂಪರ್ಕಿಸಲು ಇನ್ನೂ ಉತ್ಸುಕಳಾಗಿದ್ದೇನೆ. ಕಳೆದ 30 ದಿನಗಳಲ್ಲಿ 10 ಲಕ್ಷ ಜನರನ್ನ ಸಂಪರ್ಕಿಸಲಾಗಿದ್ದು, ಈ ವೇಳೆ ಜನರು ತಮ್ಮ ಕುಂದುಕೊರತೆಗಳನ್ನ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ನಿಮ್ಮ ಅಮೂಲ್ಯವಾದ ಸಲಹೆಗಳಿಂದ ಇನ್ನಷ್ಟು ಸದೃಢ ಸರ್ಕಾರ ನೀಡಲು ಬಯಸುತ್ತೇನೆ ಅಂತ ದೀದಿ ಫೇಸ್ಬುಕ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
