‘ಆಧುನಿಕ ಭಗೀರಥ’ ಖ್ಯಾತಿಯ 16 ಕೆರೆಗಳ ನಿರ್ಮಾತೃ ಮಂಡ್ಯದ ಕಾಮೇಗೌಡ ನಿಧನ – Vishwanews24

Featured, ರಾಜ್ಯ ನ್ಯೂಸ್

‘ಆಧುನಿಕ ಭಗೀರಥ’ ಖ್ಯಾತಿಯ 16 ಕೆರೆಗಳ ನಿರ್ಮಾತೃ ಮಂಡ್ಯದ ಕಾಮೇಗೌಡ ನಿಧನ

ಮಂಡ್ಯ: ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಪ್ರಸಿದ್ಧಿ ಪಡೆದಿದ್ದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ (83) ಸೋಮವಾರ ಮುಂಜಾನೆ ನಿಧನರಾದರು.

ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ನಿವಾಸಿಯಾಗಿ ಕುರಿಗಾಹಿಯಾಗಿದ್ದ ಅವರು ಸ್ವಂತ ದುಡಿಮೆಯಿಂದ ಬಂದ ಹಣದಲ್ಲಿ ಸಮಾಜದ ಪರವಾಗಿ ಪ್ರಕೃತಿ ಸಂರಕ್ಷಣೆ ಮಾಡಿದ್ದು, ಹಲವಾರು ವರ್ಷಗಳಿಂದ ಕುಂದುರು ಬೆಟ್ಟದಲ್ಲಿ 16 ಕೆರೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಜಲ ಮೂಲಗಳನ್ನ ಪುನರ್ಚೇತನ ಮಾಡಿದ್ದಾರೆ.

ಹಿತಶತ್ರುಗಳಿಂದ ಎಚ್ಚರವಿರಲಿ..ನೋಡಿ ಇಂದಿನ ದಿನ ಭವಿಷ್ಯ :- Vishwanews24

ಕಾಮೇಗೌಡರ ಪ್ರಕೃತಿ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು, 2020ರಲ್ಲಿ ‘ಮನ್‌ ಕಿ ಬಾತ್‌’ ಸರಣಿಯಲ್ಲಿ ಕಾಮೇಗೌಡರ ಸೇವೆಯನ್ನು ಕೊಂಡಾಡಿದ್ದರು. ರಾಷ್ಟ್ರಮಟ್ಟದಲ್ಲಿ ಹಲವು ನಾಯಕರು ಅವರ ಸೇವೆಯನ್ನು ಹೊಗಳಿದ್ದರು. ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಕೂಡ ಅವರ ಸೇವೆಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದರು. ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ದೊರಕ್ಕಿದ್ದವು.

ಹಿತಶತ್ರುಗಳಿಂದ ಎಚ್ಚರವಿರಲಿ..ನೋಡಿ ಇಂದಿನ ದಿನ ಭವಿಷ್ಯ :- Vishwanews24

Leave a Reply