Featured

ಆನ್‌ಲೈನ್ ರಮ್ಮಿ ಪ್ರಕರಣ : ವಿರಾಟ್ ಕೊಹ್ಲಿ, ತಮನ್ನಾಗೆ ಕೇರಳ ಹೈಕೋರ್ಟ್ ನೋಟಿಸ್ -Vishwanews24

ಆನ್‌ಲೈನ್ ರಮ್ಮಿ ಪ್ರಕರಣ : ವಿರಾಟ್ ಕೊಹ್ಲಿ, ತಮನ್ನಾಗೆ ಕೇರಳ ಹೈಕೋರ್ಟ್ ನೋಟಿಸ್ -Vishwanews24

ತಿರುವನಂತಪುರ: ಆನ್‌ಲೈನ್ ರಮ್ಮಿ ಆಟಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌‌ ಕೊಹ್ಲಿ, ನಟಿ ತಮನ್ನಾ ಹಾಗೂ ಮಲಯಾಳಂ ನಟ ಅಜು ವರ್ಗೀಸ್ ಅವರಿಗೆ ಕೇರಳ ಹೈಕೋರ್ಟ್ ನೋಟಿಸ್‌ ನೀಡಿದೆ.

ಆನ್‌‌ಲೈನ್‌ ರಮ್ಮಿ ಆಟಗಳನ್ನು ತಡೆಯಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎಸ್‌‌.ಎಂ.ಕುಮಾರ್‌, ನ್ಯಾ.ಎಲ್‌‌.ಕೆ.ನರೇಂದ್ರನ್‌‌‌ ಅವರನ್ನೊಳಗೊಂಡ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ನೋಟಿಸ್‌ ನೀಡಿದ್ದು, ಈ ಬಗ್ಗೆ ಕೇರಳ ಸರ್ಕಾರದಿಂದ ಉತ್ತರ ಕೇಳಿದೆ.

“ಆನ್‌‌ಲೈನ್‌ ರಮ್ಮಿ ಆಟಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಈ ಆಟಗಳನ್ನು ಕಾನೂನುಬದ್ಧವಾಗಿ ನಿಷೇಧಿಸಬೇಕು. ಈಗಾಗಲೇ ಇತರ ರಾಜ್ಯಗಳು ಇವುಗಳನ್ನು ನಿಷೇಧ ಮಾಡಿವೆ. ಕೇರಳದಲ್ಲಿ 1960ರ ಕಾನೂನು ಇದೆ. ಆದರೆ, ಬೇರೆ ಯಾವುದೇ ಕಾನೂನುಗಳನ್ನು ಕೈಗೊಂಡಿಲ್ಲ” ಎಂದು ತ್ರಿಶೂರ್‌‌ ಮೂಲದ ಪೌಲಿ ವಡಕ್ಕನ್‌ ಎಂಬವರು ಆರೋಪಿಸಿದ್ದು, ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.

“ಆನ್‌‌ಲೈನ್‌ ರಮ್ಮಿ ವಿಷಯಗಳನ್ನು ಮಾತ್ರ ಇದು ಒಳಗೊಂಡಿಲ್ಲ. ಬ್ರಾಂಡ್‌ ರಾಯಭಾರಿಗಳಾಗಿರುವ ಸ್ಟಾರ್‌ಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಆನ್‌‌ಲೈನ್‌ ರಮ್ಮಿಯಂತಹ ಆಟಗಳು ಜೂಜಾಟದಂತೆ ಇದೆ” ಎಂದಿದ್ದಾರೆ.

ಮೂಡುಬಿದಿರೆ :ಸಾವಿರ ಕಂಬದ ಬಸದಿಯಲ್ಲಿ ಸೇವಾರ್ಥ ಲಕ್ಷದೀಪೋತ್ಸವ -Vishwanews24

Vishwa News 24

Recent Posts

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:   ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

6 hours ago

ಕಾರ್ಕಳ:  ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:  ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

6 hours ago

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – vishwanews24

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…

6 hours ago

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ : ನೂತನ ಚಳಿಗಾಲದ ವೇಳಾಪಟ್ಟಿ ಪ್ರಕಟ – vishwanews24

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…

7 hours ago

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

11 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

11 hours ago