ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೆ : ಯು.ಟಿ. ಖಾದರ್ -Vishwanews24
ಬೆಂಗಳೂರು : ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ರಾಜ್ಯದ ಎಲ್ಲಾ 10 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಆನ್ ಲೈನ್ ನಲ್ಲೇ ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಈ ಸೇವೆಗೆ ಈಗ ರಾಜ್ಯದಾದ್ಯಂತ ವಿಸ್ತರಣೆಗೊಳ್ಳಲಿದೆ. ಇ-ಆಸ್ತಿ ಪೋರ್ಟಲ್ ಮೂಲಕ ತೆರಿಗೆ ಪಾವತಿಯ ಜೊತೆಗೆ ಖಾತಾ ಬದಲಾವಣೆ ಸೇವೆಯನ್ನು ಜಾರಿ ಮಾಡಲಾಗಿದೆ. ನಗರಪಾಲಿಕೆಗಳಲ್ಲದೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯತಿಗಳಲ್ಲೂ ಈ ವ್ಯವಸ್ಥೆ ಜಾರಿಯಾಗಲಿದೆ ಎಂದರು.
ಆಸ್ತಿ ತೆರಿಗೆ ಪಾವತಿಯಲ್ಲದೆ, ಅರ್ಜಿ ನಮೂನೆ3/2 ರ ಪರಿಶೀಲನೆ, ವಿವಿಧ ಬಗೆಯ ಸ್ವತ್ತುಗಳ ಹುಡುಕಾಟಕ್ಕೂ ಅವಕಾಶವಿದೆ.
ಅನುಮೋದಿತ ಸ್ವತ್ತುಗಳು, ಜಿಲ್ಲಾವಾರು ಅನುಮೋದಿತ ಸ್ವತ್ತುಗಳ ಮಾಹಿತಿಯೂ ಇ-ಆಸ್ತಿಯಲ್ಲಿ ಸಿಗಲಿದೆ.
