Featured

ಆರೆಸ್ಸೆಸ್ ಹಿಂದೆ ಬಹುದೊಡ್ಡ ಹಣ ಅಕ್ರಮ ವರ್ಗಾವಣೆ ದಂಧೆ ಇದೆ : ಪ್ರಿಯಾಂಕ್ ಖರ್ಗೆ – vishwanews24

ಆರೆಸ್ಸೆಸ್ ಸಂಘಟನೆ ಸಂವಿಧಾನ, ಕಾನೂನು ಅಡಿಯಲ್ಲಿ ನೋಂದಣಿ ಆಗುವರೆಗೂ ಬಿಡುವ ಮಾತೇ ಇಲ್ಲ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಆರೆಸ್ಸೆಸ್ ಹಿಂದೆ ಬಹುದೊಡ್ಡ ಹಣ ಅಕ್ರಮ ವರ್ಗಾವಣೆ ದಂಧೆ(ಮನಿ ಲಾಂಡರಿಂಗ್) ಇದೆ. ಹೀಗಾಗಿ, ಕಾನೂನು, ಸಂವಿಧಾನದಡಿ ಈ ಸಂಘಟನೆ ನೋಂದಣಿ ಆಗುವವರೆಗೂ ನಾನು ಈ ವಿಚಾರ ಕೈಬಿಡುವ ಪುಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರವಿವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಅಹರ್ನಿಶಿ ಪ್ರಕಾಶನ ಸಹಯೋಗದೊಂದಿಗೆ ಏರ್ಪಡಿಸಿದ್ದ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಬರೆದಿರುವ ‘ಕರಾವಳಿಯ ರಕ್ತ-ಕಣ್ಣೀರು’ (ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಸಂಘಟನೆಯೊಂದಿಗೆ ಸರಿ ಸುಮಾರು 2500 ಸಹ ಸಂಘಟನೆಗಳು ಜತೆಯಾಗಿವೆ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ಗಮನಿಸಿದರೆ, ಆರೆಸ್ಸೆಸ್ ಹಿಂದೆ ಬಹುದೊಡ್ಡ ಹಣ ಅಕ್ರಮ ವರ್ಗಾವಣೆ ದಂಧೆ(ಮನಿ ಲಾಂಡರಿಂಗ್) ಇದೆ ಎಂದು ಹೇಳಬಹುದು ಎಂದರು.

ಇದನ್ನೂ ಓದಿ:

ಆರೆಸ್ಸೆಸ್‌ನ ಹಣದ ಮೂಲ ಪ್ರಶ್ನೆ ಮಾಡಿದರೆ ನಮಗೆ ಗುರು ದಕ್ಷಣೆ ಬರುತ್ತದೆ ಎಂದು ತಿಳಿಸುತ್ತಾರೆ. ಆದರೆ, ನಾನು ಅಧ್ಯಯನ ನಡೆಸಿದಾಗ ಇವರ ಪ್ರಕಾರ ಗುರು ದಕ್ಷಣೆ ಎಂದರೆ ‘ಧ್ವಜ’ ಎಂದರ್ಥ. ಹಾಗಾದರೆ, ನಾಳೆ ಬೆಳಗ್ಗೆ ನಾನು ಸಹ ನೀಲಿ ಧ್ವಜ ಹಾರಿಸಿ ಹಣ ವಸೂಲಿ ಮಾಡಿದರೆ, ಸರಕಾರ, ಇವರು(ಆರೆಸ್ಸೆಸ್) ಒಪ್ಪುತ್ತಾರೆಯೇ ಎಂದು ಕೇಳುತ್ತೇನೆ. ಹೀಗೆ, ಆಧಾರ ರಹಿತ ಮಾತುಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದೆ ಈ ಆರೆಸ್ಸೆಸ್ ಸಂಘಟನೆ ಸಂವಿಧಾನ, ಕಾನೂನು ಅಡಿಯಲ್ಲಿ ನೋಂದಣಿ ಆಗುವರೆಗೂ ನಾನು ಬಿಡುವ ಮಾತೇ ಇಲ್ಲ ಎಂದು ಅವರು ಹೇಳಿದರು. ವಾಲ್ಮೀಕಿ ಬರೆದ ರಾಮಾಯಣವೇ ಬೇರೆ, ಈಗ ನಡೆಯುತ್ತಿರುವುದೇ ಬೇರೆ. ರಾಜಕಾರಣಿಗಳು, ಧಾರ್ಮಿಕ ಗುರುಗಳು ತಮಗೆ ಬೇಕಾದಂತೆ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಯಾವ ಧರ್ಮವೂ ಹಿಂಸೆ ಪುಚೋದಿಸಲ್ಲ. ಮೂರು-ಮೂರು ಮಕ್ಕಳನ್ನು ಹೆರಬೇಕು ಎನ್ನುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮದುವೆ ಆಗಲ್ಲ. ಆದರೂ, ಬೇರೆಯವರ ಮಕ್ಕಳನ್ನು ಎತ್ತಿಕಟ್ಟುವ ಮಾತು ಹೇಳುತ್ತಾರೆ. ಹೀಗೆ, ಬಿಜೆಪಿಯವರು ಹೊರಗೊಂದು, ಒಳಗೊಂದು ಮಾತುಗಳನ್ನು ನಿತ್ಯ ಹೇಳಿ ಬಡವರ ಮಕ್ಕಳನ್ನು ಬೀದಿಪಾಲು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:

 

Vishwa News 24

Recent Posts

ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು – vishwanews24

ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು  ಉಡುಪಿ: ಕರಾವಳಿಯಲ್ಲಿ ನಿರೀಕ್ಷಿತ ಮುಂಗಾರು ಮಳೆಯಾಗದ ಕಾರಣ ಈ ಋತುವಿನಲ್ಲಿ…

9 minutes ago

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

18 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

18 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

19 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

22 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

22 hours ago