ಆರೋಗ್ಯ, ಸೌಂದರ್ಯ ವೃದ್ಧಿಸಬಲ್ಲ ಹಸಿರು ಸೊಪ್ಪುಗಳ ರಾಜ ಪಾಲಾಕ್ ಸೊಪ್ಪಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಮಾಹಿತಿ -Vishwanews24
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಜನರು ಜೀವನ ಸಾಗಿಸಲು ಆರಂಭಿಸಿದ್ದಾರೆ. ಪ್ರತೀ ಕಾಯಿಲೆ, ಸಮಸ್ಯೆಗಳಿಗೂ ವೈದ್ಯರ ಮೊರೆ ಹೋಗುವುದು ಸಾಮಾನ್ಯವಾಗಿ ಹೋಗಿದೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹು ಮುಖ್ಯವಾಗಿದ್ದು, ಇವುಗಳ ಪ್ರಾಮುಖ್ಯತೆಗಳನ್ನು ಪೋಷಕರು ತಿಳಿದುಕೊಂಡು, ಅದನ್ನು ಮಕ್ಕಳಿಗೂ ಹೇಳಿಕೊಡುವ ಮನೋಭಾನೆಯನ್ನು ಬೆಳೆಸಿಕೊಳ್ಳಬೇಕು.
ಪ್ರತೀನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಪಾಲಾಕ್ ಸೊಪ್ಪು ಅನೇಕ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಬಲ್ಲ ಗುಣಗಳನ್ನು ಹೊಂದಿದೆ. ಇದರ ಬಗ್ಗೆ ಬಹುತೇಕ ಮಂದಿಗೆ ಮಾಹಿತಿಯೇ ತಿಳಿದಿರುವುದಿಲ್ಲ. ಪಾಲಾಕ್ ಸೊಪ್ಪಿನ ಮಹತ್ವದ ಕುರಿತು ಹಾಗೂ ಅದರಲ್ಲಿರುವ ಔಷಧೀಯ ಗುಣಗಳನ್ನು ಇಲ್ಲಿ ವಿವರಿಸಲಾಗಿದೆ…

- ಹಸಿರು ತರಕಾರಿ ಹಾಗೂ ಸೊಪ್ಪುಗಳ ಮಾರಾಟಕ್ಕೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಪ್ ಗಳಿದ್ದು, ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಸೊಪ್ಪು ಹಾಗೂ ತರಕಾರಿಗಳನ್ನು ಆರ್ಡರ್ ಮಾಡಿ ಮನೆಗಳ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು.ಕೀರೈಕಡೈ ಎಂಬ ಕೊಯಿಮತ್ತೂರು ಮೂಲದ ಆ್ಯಪ್ ಹಸಿರು ಸೊಪ್ಪುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಕೇವಲ ಮಾರಾಟ ಮಾಡುವುದಷ್ಟೇ ಅಲ್ಲದೆ, ಅಡುಗೆ ಮಾಡುವ ಕ್ರಮಗಳ ಕುರಿತೂ ಆ್ಯಪ್ ನಲ್ಲಿ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ.
- ಕೀರೈಕಡೈ ಸ್ಥಾಪಕ ಶ್ರೀರಾಮ್ ಈ ಬಗ್ಗೆ ಮಾತನಾಡಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದತ್ತ ಹೆಚ್ಚು ಗಮನಕೊಡಲು ಆರಂಭಿಸಿದ್ದಾರೆ. ಪಾಲಾಕ್ ಸೊಪ್ಪಿನ ಮಹತ್ವ ಅರಿತುಕೊಂಡು ಪ್ರತೀನಿತ್ಯದ ತಮ್ಮ ಆಹಾರ ಕ್ರಮದಲ್ಲಿ ಪಾಲಾಕ್ ಸೊಪ್ಪನ್ನು ಸೇರ್ಪಡೆಗೊಳಿಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.
- ಕೊಯಿಮತ್ತೂರಿನಲ್ಲಿ ಒಟ್ಟು 35 ಕೃಷಿ ಭೂಮಿಯಿದ್ದು, ಅಲ್ಲಿ ಹಸಿರು ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಪ್ರತೀನಿತ್ಯ 10,000 ಹೆಚ್ಚು ಸೊಪ್ಪು ಕಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಅಂಗಡಿ ಬೆಳಿಗ್ಗೆ 6.30ರಿಂದ 11ರವರೆಗೂ ಹಾಗೂ ಸಂಜೆ 4ರಿಂದ 9ರವರೆಗೂ ತೆರೆಯಲಾಗಿರುತ್ತೆದ. ತರಕಾರಿ ಹಾಗೂ ಸೊಪ್ಪಿನಿಂದ ತಯಾರಿಸಿದ ಕುರುಕಲು ತಿಂಡಿಗಳನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ. ಆ್ಯಪ್ ಮೂಲಕ ಬಂದ ಆರ್ಡರ್ ಗಳನ್ನು ಸ್ವೀಕರಿಸಿ, ಗ್ರಾಹಕರಿಗೆ ತರಕಾರಿ, ಸೊಪ್ಪು ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯವರ್ಧಕ ಗುಣಗಳು
* ಕೂದಲಿನ ಬೆಳವಣಿಗೆಗೆ ಪಾಲಾಕ್ ಸೊಪ್ಪು ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಕೂದಲು ಉದುರುವುದನ್ನು ತಡೆದು, ನೈಸರ್ಗಿಕ ಕಾಂತಿ ನೀಡುತ್ತದೆ.
* ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ.
* ನರ ದೌರ್ಬಲ್ಯವಿದ್ದವರು ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
* ಪಾಲಾಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ. ಏಕೆಂದರೆ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಶಕ್ತಿ ಪಾಲಾಕ್ ಸೊಪ್ಪಿನಲ್ಲಿದೆ.
* ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪಾಲಾಕ್ ಸೊಪ್ಪನ್ನು ಹೆಚ್ಚು ಸೇವಿಸಿ. ಇದರಲ್ಲಿರುವ “ಕ್ಯಾರೋಟಿನೈಡ್” ಅಂಶ ದೇಹದಲ್ಲಿರುವ ಕೊಲೆಸ್ಟ್ರಾಲನ್ನ ಕರಗಿಸಿ, ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
* ದಿನನಿತ್ಯ ಪಾಲಾಕ್ ಸೊಪ್ಪಿನ ರಸ ಸೇವಿಸುವುದರಿಂದ ರಕ್ತಹಿನತೆಯ ಸಮಸ್ಯೆ ನಿವಾರಣೆಯಾಗುತ್ತದೆ.
* ಮಕ್ಕಳಲ್ಲಿ ಅಥವಾ ವೃದ್ಧರಲ್ಲಿ ನೆನಪಿನ ಶಕ್ತಿ ಸಮಸ್ಯೆಯಿದ್ದರೆ ಪಾಲಾಕ್ ಸೊಪ್ಪು ಸೇವಿಸುವುದರಿಂದ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
* ಸಂಧಿವಾತದ ಸಂಸ್ಯೆಯಿದ್ದವರೂ ಕೂಡ ಪಾಲಾಕ್ ಸೊಪ್ಪು ಸೇವಿಸಬಹುದು.
* ಪಾಲಾಕ್ ಸೊಪ್ಪಿನಲ್ಲಿ ಹೆಚ್ಚು ನಾರಿನಂಶ ಹಾಗೂ ನೀರಿನಂಶ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದಲ್ಲದೆ, ಜೀರ್ಣಶಕ್ತಿಗೆ ಸಹಕರಿಸುತ್ತದೆ.
ಹಾಗಿದ್ದರೆ ಇನ್ನೇಕೆ ತಡ. ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಪಾಲಾಕ್ ಸೊಪ್ಪನ್ನು ಅಳವಡಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ.

