Featured

ಆರ್ಥಿಕ ದುರ್ಬಲರಿಗೆ ಒಳ್ಳೆಯ ಆಹಾರ ಸಿಗುವ ಸಲುವಾಗಿ ಈ ಪ್ಯಾಕೇಜ್ ಕೊಡುತ್ತಿದ್ದೀವಿ : ಸಿಎಂ ಬೊಮ್ಮಾಯಿ – Vishwanews24

ಕಾಂಗ್ರೆಸ್ ನಮ್ಮ ಸರ್ಕಾರದ ಯೋಜನೆಗಳನ್ನೇ  ಕಾಪಿ ಮಾಡಿದೆ :ಸಿಎಂ ಬೊಮ್ಮಾಯಿ

ಮೈಸೂರು: ಪಡಿತರದಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ, ಜೊತೆಗೆ ಅರ್ಧ ಲೀಟರ್ ನಂದಿನಿ ಹಾಲು ಸೇರಿಸಿ ನಾವು ಸಂಪೂರ್ಣ ಆರೋಗ್ಯ ಕಿಟ್ ಕೊಡುತ್ತಿದ್ದೇವೆ. ಆರ್ಥಿಕ ದುರ್ಬಲರಿಗೆ ಒಳ್ಳೆಯ ಆಹಾರ ಸಿಗುವ ಸಲುವಾಗಿ ಈ ಪ್ಯಾಕೇಜ್ ಕೊಡುತ್ತಿದ್ದೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅವರು ಇಂದು ಮೈಸೂರಿನಲ್ಲಿ ಸಾರ್ವಜನಿಕ ರೋಡ್ ಶೋಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರೈತರು ಬೆಳೆಯುವ ಜೋಳ, ರಾಗಿ ಸೇರಿದಂತೆ ಎಲ್ಲ ಸಿರಿಧಾನ್ಯಗಳನ್ನು ಅವರಿಂದ ಖರೀದಿ ಮಾಡಿ ಅವರಿಗೆ ಬೆಂಬಲ ನೀಡುವ ಯೋಜನೆ ನಮ್ಮದು. ಇದರಿಂದ ಪೌಷ್ಠಿಕ ಆಹಾರ ಕೂಡ ಸಿಗುತ್ತದೆ. ಹಾಲು ಕೊಡುವುದರಿಂದ ರೈತರಿಂದ ದೊಡ್ಡ ಪ್ರಮಾಣದ ಖರೀದಿ ಆಗುತ್ತದೆ ಮತ್ತು ಅವರಿಗೆ ಉತ್ಪಾದನೆ ಮಾಡಲು ಬೆಂಬಲ ಸಿಗುತ್ತದೆ. ಈ ಬಗ್ಗೆ ಸಮಗ್ರ ಚಿಂತನೆ ಮಾಡಿ ಈ ಯೋಜನೆ ಮಾಡಿದ್ದೇವೆ. ಸಿರಿಧಾನ್ಯ ಉತ್ಪಾದನೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಬೆಲೆ ಕಡಿಮೆ ಇದ್ದ ರಾಗಿ ಪಡಿತರದಲ್ಲಿ ಕೊಟ್ಟ ಮೇಲೆ ಹೆಚ್ಚಿನ ಉತ್ಪಾದನೆ ಆಗ್ತಿದೆ ಮತ್ತು ಉತ್ತಮ ಬೆಲೆ ಕೂಡ ಸಿಗ್ತಿದೆ. ನಮ್ಮ ಪೋಷಣ್ ಅಭಿಯಾಣದಲ್ಲಿ ಇದೆಲ್ಲವೂ ಸೇರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ 65% ಅವರೇ ಮಾಡಿಲ್ಲ. ಮೊದಲು ಅವರು ರಿಪೋರ್ಟ್ ಕಾರ್ಡ್ ಕೊಡಲಿ. ನಮ್ಮ ಕಾಲದಲ್ಲಿ ಕೋವಿಡ್ ಬಂದಿದ್ದರಿಂದ ಸ್ವಲ್ಪ ಮಾರ್ಪಾಡು ಮಾಡಿಕೊಂಡು ಹೊಸ ಸ್ಕೀಂಗಳನ್ನು ಕೊಟ್ಟಿದ್ದೇವೆ. ಇದನ್ನು ವಿಧಾನಸಭೆಯಲ್ಲೂ ಹೇಳಿದ್ದೇನೆ. ನಾನು ಬಜೆಟ್ ನಲ್ಲೇ ವಿದ್ಯಾರ್ಥಿನಿಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆ. ಎಸ್ಸಿ ಎಸ್ಟಿ ಕುಟುಂಬಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದೆ, ಅದನ್ನೇ ಕಾಂಗ್ರೆಸ್ ಅವರು ಕಾಪಿ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

 

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

6 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

14 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

14 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

15 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

15 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

15 hours ago