ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಮುಂದಿನ ಹಣಕಾಸು ವರ್ಷಕ್ಕೆ ರಕ್ಷಣಾ ಕ್ಷೇತ್ರಕ್ಕಾಗಿ ಮೀಸಲಿರಿಸುವ ಹಣದಲ್ಲಿ ಕಡಿತ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದ್ದು, ಪಾಕಿಸ್ತಾನ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಪಾಕ್ ಸೇನೆ ಸ್ವಯಂ ಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿದ್ದು, ಇದೊಂದು ಅಪರೂಪದ ವಿದ್ಯಮಾನ ಎಂದು ವರದಿ ಮಾಡಿದೆ. ಆದರೆ ವರದಿಯಲ್ಲಿ ಪಾಕ್ ಸೇನೆ ತನ್ನ ಬಜೆಟ್ ನಲ್ಲಿ ಎಷ್ಟು ಪ್ರಮಾಣದ ಕಡಿತಗೊಳಿಸಿದೆ ಎಂಬುದರ ಕುರಿತು ಸ್ಪಷ್ಟ ವರದಿ ದೊರೆತಿಲ್ಲ. ಪಾಕ್ ಸೇನೆ ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.
ಅಂತೆಯೇ ಈ ಬಗ್ಗೆ ಪಾಕಿಸ್ತಾನ ಸೇನೆಯ ಮಾಧ್ಯಮ ಘಟಕದ ಮಹಾನಿರ್ದೇಶಕ ಮೇಜರ್ ಜನರಲ್ ಅಸೀಫ್ ಗಫೂರ್ ಕೂಡ ಟ್ವೀಟ್ ಮಾಡಿದ್ದು, ‘ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳದೆಯೇ ರಕ್ಷಣಾ ವೆಚ್ಚ ಕಡಿತಗೊಳಿಸಲಾಗುವುದು. ಎಲ್ಲ ರೀತಿಯ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ.
ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು…
ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್ ಬೀದರ್: ‘ದೇಶ ವಿರೋಧಿ ಚಟುವಟಿಕೆ ಮಾಡಿದಾಗ…
ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು .. ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ…
ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ - ನಾಲ್ವರು ಮೀನುಗಾರರ ರಕ್ಷಣೆ ಕುಂದಾಪುರ :ಮೀನುಗಾರಿಕಾ ದೋಣಿಯ ಎಂಜಿನ್ ದೋಷದಿಂದ ಸಮುದ್ರದ…
ಮಂಗಳೂರು: ಕೃತಕ ಪನ್ನೀರ್, ಫುಡ್ ಕಲರ್, ಅಜಿನಮೊಟೊ ವಿರುದ್ಧ ಕ್ರಮ ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ :…
ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು ಪುತ್ತೂರು: ಹಲವು…