Featured

ಮೈತ್ರಿ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ : ಚೆಲುವರಾಯಸ್ವಾಮಿ -Vishwanews24

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಂಡ್ಯದ ಕೈ ನಾಯಕ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿಯೂ ಸರ್ಕಾರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಇದರಿಂದ ಜೊತೆಲಿದ್ದಂತಹ ಕಾಂಗ್ರೆಸ್ ಪಕ್ಷ ನೋವು ಅನುಭವಿಸಬೇಕಾಗುತ್ತದೆ. ಜೆಡಿಎಸ್ ನವರರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ಧ. ಆದರೆ ಇದೇ ತರ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮ ನಾಯಕರು ಇದನ್ನ ಸರಿಪಡಿಸಬೇಕು ಇಲ್ಲ, ಒಂದು ಪೂರ್ಣ ಪ್ರಮಾಣದ ತೀರ್ಮಾನ ತೆಗೆದುಕೊಳ್ಳಬೇಕು. ಆಗ್ಲಿಲ್ಲ ಅಂದರೆ ಮುಂದೆ ಪಕ್ಷವನ್ನು ಈ ಸ್ಥಿತಿಗೆ ಬರದೆ ಇರುವಂತೆ ನೋಡಿಕೊಳ್ಳವುದಕ್ಕೆ ಪಕ್ಷದ ಎಲ್ಲ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡುವುದಕ್ಕೆ ಹೋಗಲ್ಲ. ಆದರೆ ಈಗಿನ ನಡವಳಿಕೆ ನೋಡುತ್ತಿದ್ದರೆ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣುತ್ತಿಲ್ಲ.

ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ ಎಂದು ಈಗ ಕೆಲವರಿಗೆ ಮನವರಿಕೆಯಾಗಿದೆ. ನಾನು ಕಾದು ನೋಡುತ್ತೀನಿ. ಹೆಚ್ಚು ದಿನ ಉಳಿಯಲ್ಲ.ಈಗಾಗಲೇ ಜನ ಲೋಕಸಭಾ ಚುನಾವಣೆಯಲ್ಲಿ ಒಂದು ಸಾರಿ ತೋರಿಸಿದ್ದಾರೆ. ಇನ್ನು ಮತ್ತೆ ಅದನ್ನೇ ಮಾಡಿದರೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಬಿಡಿ, ನನ್ನೊಬ್ಬನ ಕೈಲಿ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಎಲೆಕ್ಷನ್‍ಗೆ ಹೋಗೋಣ ಇಲ್ಲ ವಿರೋಧ ಪಕ್ಷವಾಗಿ ಕೂರೋಣ” ಎಂದು ಬರೆದು ಈ ಮೂಲಕ ತಮ್ಮ ನಿರ್ಧಾರವನ್ನು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

Vishwa News 24

Recent Posts

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ – vishwanews24

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು…

14 hours ago

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ – vishwanews24

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ ಬೀದರ್‌: ‘ದೇಶ ವಿರೋಧಿ ಚಟುವಟಿಕೆ ಮಾಡಿದಾಗ…

14 hours ago

ಬಿಜೆಪಿಯಿಂದ ಅಧಿವೇಶನಕ್ಕೆ ಅಡ್ಡಿ ಹಿಂದೆ ಹಿಡನ್ ಅಜೆಂಡಾ: ಯು.ಟಿ.ಖಾದರ್ ಆರೋಪ – vishwanews24

ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು .. ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ…

14 hours ago

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ – ನಾಲ್ವರು ಮೀನುಗಾರರ ರಕ್ಷಣೆ – vishwanews24

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ - ನಾಲ್ವರು ಮೀನುಗಾರರ ರಕ್ಷಣೆ ಕುಂದಾಪುರ :ಮೀನುಗಾರಿಕಾ ದೋಣಿಯ ಎಂಜಿನ್ ದೋಷದಿಂದ ಸಮುದ್ರದ…

15 hours ago

ಮಂಗಳೂರು: ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ : ಸಚಿವ ಯು.ಟಿ.ಖಾದರ್ – vishwanews24

ಮಂಗಳೂರು: ಕೃತಕ ಪನ್ನೀರ್, ಫುಡ್ ಕಲರ್‌, ಅಜಿನಮೊಟೊ ವಿರುದ್ಧ ಕ್ರಮ ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ :…

18 hours ago

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  – vishwanews24

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  ಪುತ್ತೂರು: ಹಲವು…

18 hours ago