ಆರ್ ಎಸ್ ಎಸ್ ಅನ್ನು ಮುಸ್ಲಿಂ ಬ್ರದರ್ ಹುಡ್ ಗೆ ಹೋಲಿಕೆ ಮಾಡಿದ ರಮ್ಯಾಳಿಗೆ ಖಡಕ್ ಎಚ್ಪರಿಕೆ ನೀಡಿದ ನವರಸ ನಾಯಕ
“ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಮುಸ್ಲಿಂ ಬ್ರದರ್ ಹುಡ್ ಸಂಘಟನೆಯಿದ್ದಂತೆ. ಆ ಸಂಘಟನೆ ಹುಟ್ಟಿದ್ದು 1920ಕ್ಕೆ ಹಾಗೂ ಸಂಘ ಹುಟ್ಟಿದ್ದೂ 1920ಕ್ಕೆ. ಆ ಸಂಘಟನೆಯೂ ಜಾತ್ಯಾತೀತ ರಾಷ್ಟ್ರವನ್ನು ಒಪ್ಪುತ್ತಿಲ್ಲ, ಸಂಘವೂ ಜಾತ್ಯಾತೀತ ರಾಷ್ಟ್ರವನ್ನು ಒಪ್ಪುತ್ತಿಲ್ಲ, ಆ ಸಂಘಟನೆಯ ಹುರಿ ಇಸ್ಲಾಮೀಕರಣ ಸಂಘದ ಗುರಿ ಹಿಂದೂರಾಷ್ಟ್ರ” ಹೀಗೆ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಒಂದು ಟ್ವೀಟ್ ಮಾಡಿದ್ದರು.
ಸಂಘದ ತಂಟೆಗೆ ಈ ರಮ್ಯಾ ಬಂದಿದ್ದೇ ತಡ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ನವರಸ ನಾಯಕ ಜಗ್ಗೇಶ್ ಕಿಡಿ ಕಾರಿದ್ದಾರೆ. ರಮ್ಯಾಗೆ ಕೌಂಟರ್ ಕೊಡುವ ಮೂಲಕ ಆಕೆಯ ಸುಳ್ಳನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಮೊದಲು ಇತಿಹಾಸ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. “ಯಾರಿಗೆ ವಸ್ತುಸ್ಥಿತಿ ಅನುಭವದ ಕೊರತೆ ಇರುತ್ತೋ ಅಂಥವರು ಬೇಜವಬ್ಧಾರಿ ಹೇಳಿಕೆಗಳನ್ನು ನೀಡುತ್ತಾರೆ..ಕೇರಳ, ಕೊಡಗಿನ ಮಳೆ ಅವಾಂತರಕ್ಕೆ ಭುಜಕೊಟ್ಟಿದ್ದು ಸಂಘವೇ ವಿನಹ ಇಂಥಹಾ ಬಾಲಿಷ ಹೇಳಿಕೆ ಕೊಡುವವರಲ್ಲಾ. ಅಂದೇ ನೆಹರೂ ಸಂಘದ ಕಾರ್ಯವೈಖರಿಯನ್ನು ಮೆಚ್ಚಿ ಹೊಗಳಿದ್ದರು.. ಓದಲು ಬಂದರೆ ಇತಿಹಾಸ ಪುಟ ತಿರುಗಿಸಿ ಓದಲು ಹೇಳಿ,, ಆಗಲೂ ತಿಳಿಯದಿದ್ದರೆ ಕ್ಯಾಚ್ ಆಫೀಸರ್ ಕಂಟಿನ್ಯೂ” ಎಂದು ಜಗ್ಗೇಶ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಸಂಘದ ವಿರುದ್ಧ ಮಾತನಾಡಿ ಕೋರ್ಟ್ ಕಟಕಟೆಯೇರಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ತಾನೂ ಸಾಲದು ಎಂಬಂತೆ ರಮ್ಯಾರನ್ನೂ ಕೋರ್ಟ್ ಮೆಟ್ಟಿಲೇರಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.
