ಆರ್.ಎಸ್.ಎಸ್ ಕಾಪು ತಾಲೂಕು ಸಂಘಚಾಲಕ ದಿ.ತಾರನಾಥ್ ಕೋಟ್ಯಾನ್ ಅವರ ಶೃದ್ಧಾಂಜಲಿ ಸಭೆ.vishwanews24
ಆರ್.ಎಸ್.ಎಸ್ ಕಾಪು ತಾಲೂಕು ಸಂಘಚಾಲಕ ದಿ.ತಾರನಾಥ್ ಕೋಟ್ಯಾನ್ ಅವರ ಶೃದ್ಧಾಂಜಲಿ ಸಭೆ.
ಕಾಪು: ಕಾಪು ತಾಲೂಕಿನ ಆರ್ ಎಸ್ ಎಸ್ ತಾಲೂಕು ಸಂಘಚಾಲಕರಾಗಿದ್ದ ದಿ.ತಾರನಾಥ್ ಕೋಟ್ಯಾನ್ ಅವರಿಗೆ ಚಿರಶಾಂತಿಯನ್ನು ಕೋರಿ ಕಾಪು ವೀರಭದ್ರ ಸಭಾಭವನದಲ್ಲಿ ಶೃದ್ಧಾಂಜಲಿ ಸಭೆ ನಡೆಯಿತು.
ಈ ಸಂಧರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ” ಸಮಾಜದಲ್ಲಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದುಕೊಂಡು ಕೆಲವು ವರ್ಷಗಳ ಹಿಂದೆ ಕಾಪುವಿನಲ್ಲಿ ನಡೆದ ಹನುಮಚಾಲಿಸ ಯಜ್ಞ ಕಾರ್ಯಕ್ರಮ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.ಕೋಟ್ಯಾನ್ ಅವರ ಅಗಲುವಿಕೆ ಹಿಂದೂ ಸಮಾಜಕ್ಕೆ ತುಂಬಲಾಗದ ನಷ್ಟ ಎಂದರು.
ವಾಮನ ಶೆಣೈ ಮಾತನಾಡಿ ಬ್ರಹ್ಮಲಿಪಿ ಬದಲಾಯಿಸುವ ಅಧಿಕಾರ ಈ ಭೂಮಿಯಲ್ಲಿ ಯಾರಿಗೂ ಇಲ್ಲ ಹಾಗಂತ ಕೋಟ್ಯಾನ್ ಅವರ ಇಹಲೋಕ ತ್ಯಜಿಸುವ ವಯಸ್ಸಲ್ಲ.ದೇವರಿಗೆ ಯಾರು ತುಂಬಾ ಹತ್ತಿರ ಇರುತ್ತಾರೋ ಅವರನ್ನು ದೇವರು ಬೇಗನೇ ತನ್ನ ಬಳಿ ಕರೆಸಿಕೊಳ್ಳುತ್ತಾನೆ.ಸಜ್ಜನನಾಗಿದ್ದುಕೊಂಡು ಸಮಾಜದೊಂದಿಗೆ ಬೆರೆಯುತ್ತಿದ್ದ ತಾರನಾಥ್ ಕೋಟ್ಯಾನ್ ಅವರ ನಡೆನುಡಿ ಯಾವಾಗಲೂ ನೇರವಾಗಿ ಇರುತ್ತಿತ್ತು ಕಲ್ಮಶ ಇಲ್ಲದ ಮನಸ್ಸು ಕೋಟ್ಯಾನ್ ಅವರದ್ದು ಎಂದರು.
ಸವಾಲುಗಳನ್ನು ಮೆಟ್ಟಿ ನಿಂತು ಧೈರ್ಯದಿಂದ ಉತ್ತರ ಕೊಡುವ ಶಕ್ತಿ ಇವರಿಗಿತ್ತು ಅಲ್ಲದೆ ಯಾವುದೇ ಸಮಯದಲ್ಲ್ಲೂ ಮುಗುಳ್ನಗೆಯೊಂದಿಗೆ ಸದಾ ಹಾಲು ಜೇನಿನಂತೆ ಬೆರೆಯುತ್ತಿದ್ದ ತಾರನಾಥ ಕೋಟ್ಯಾನ್ ಈಗ ಇಲ್ಲ ಅನ್ನುವುದೆ ನಂಬಲಾಗದು ಎಂದರು.
ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ ಗುರ್ಮೆ,ಯಶ್ಪಾಲ್ ಸುವರ್ಣ,ಮಟ್ಟಾರ್ ರತ್ನಾಕರ ಹೆಗ್ಡೆ,ಕುಯಿಲಾಡಿ ಸುರೇಶ್ ನಾಯಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,ವಾಮನಶೆಣೈ,ಕುಶ ಸಾಲಿಯಾನ್,ವಸಂತ್ ಕುಂದರ್,ಮೊದಲಾದವರು ಉಪಸ್ಥಿತಿತರಿದ್ದರು.








