ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ : ಸಿಬ್ಬಂದಿ ಅರೆಸ್ಟ್ – vishwanews24

ಉಡುಪಿ

ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ : ಸಿಬ್ಬಂದಿ ಅರೆಸ್ಟ್

ಬೆಂಗಳೂರು: ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಅಲ್ಲಿನ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ನಾಗರಭಾವಿಯ  ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಪಕ್ಷದ ಕಾರ್ಯಕರ್ತನಾಗಿ ಕಸ ಗುಡಿಸಿ, ಅಧ್ಯಕ್ಷನಾಗಿ ಪಕ್ಷದ ಬಾವುಟ ಕಟ್ಟಿ, ಎಲ್ಲ ಕೆಲಸ ಮಾಡಿದ್ದೇನೆ :  ಡಿಕೆಶಿ – vishwanews24

ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುವುದನ್ನ ನರ್ಸ್ ಒಬ್ಬರು ಗಮನಿಸಿದ್ದರು. ಬಳಿಕ ಈ ಕುರಿತು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. ಅದರಂತೆ ಆಸ್ಪತ್ರೆಯ ಹಿರಿಯ ವೈದ್ಯ ಚೇತನ್ ಆರೋಪಿಯ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನ ಬಂಧಿಸಿ, ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್‌ನ್ನು ಸೀಜ್ ಮಾಡಿದ್ದಾರೆ.

ಆರೋಪಿ ವಿಡಿಯೋ ಮಾಡಿಕೊಂಡಿರುವುದನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ. ಹೀಗಾಗಿ ಈ ನರ್ಸ್ನದ್ದು ಮಾತ್ರ ವಿಡಿಯೋ ಮಾಡಿಕೊಂಡಿದ್ದಾನಾ? ಅಥವಾ ಬೇರೆ ಆಪರೇಷನ್ ಥೇಟರ್‌ನಲ್ಲಿ ಕೆಲಸ ಮಾಡುವ ನರ್ಸ್ಗಳೆಲ್ಲರ ವಿಡಿಯೋ ಮಾಡಿಕೊಂಡಿದ್ದಾನಾ? ಹಾಗೂ ಮಾಡಿಕೊಂಡಿರುವ ವಿಡಿಯೋ ಬೇರೆಯವರಿಗೆ ಕಳುಹಿಸಿದ್ದಾನಾ? ಎನ್ನುವುದನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ಟಿಪ್ಪರ್‌ ಹಾಗೂ ಬೈಕ್ ಡಿಕ್ಕಿ :  ಬೈಕಿನಲ್ಲಿದ್ದ ನಾಲ್ವರು ದುರ್ಮರಣ – vishwanews24

Leave a Reply