ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೀಲಿ ಜೆರ್ಸಿಯ ಬದಲಾಗಿ ಕೇಸರಿ ಬಣ್ಣದ ಜೆರ್ಸಿ ಧರಿಸಲಿದ್ದಾರೆ ಟೀಮ್ ಇಂಡಿಯಾ ಆಟಗಾರರು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಇಂಗ್ಲೆಂಡ್​-ವೇಲ್ಸ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ನೀಲಿ ಜೆರ್ಸಿಯ ಬದಲಾಗಿ ಕೇಸರಿ ಬಣ್ಣದ ಉಡುಪು ಧರಿಸಿ ಕಣಕ್ಕಿಳಿಯಲಿದ್ದಾ ರೆ.

ಇಂಟರ್​​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ (ICC) ನಿಯಮದ ಅನುಸಾರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೆ ಎರಡು ಬಣ್ಣಗಳ ಜೆರ್ಸಿಯನ್ನು ಬಳಸಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಫುಟ್​ಬಾಲ್​ ಪಂದ್ಯಗಳ ವೇಳೆ ಕಂಡು ಬರುವ ಹೋಂ ಅಂಡ್ ಅವೇ ಮಾದರಿಯಲ್ಲಿ ಈ ನಿಯಮವಿದ್ದು, ಇಲ್ಲಿ ಆತಿಥೇಯ ದೇಶವನ್ನು ಹೊರತುಪಡಿಸಿ ಇತರ ತಂಡಗಳಿಗೆ ಜೆರ್ಸಿಯ ಆಯ್ಕೆ ಇರಲಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತನ್ನ ಜೆರ್ಸಿ ಬಣ್ಣವನ್ನು ಬದಲಾಯಿಸಿ ಆರೆಂಜ್ ಉಡುಪು ಧರಿಸಿ ಆಡಲಿದೆ. ಟೀಂ ಇಂಡಿಯಾ ಜೂನ್ 30 ರಂದು ಇಂಗ್ಲೆಂಡ್ ವಿರುದ್ಧ ಸೆಣೆಸಾಟ ನಡೆಸಲಿದೆ.

ಆದರೆ ಟೀಮ್ ಇಂಡಿಯಾದ ಜೆರ್ಸಿ ಬಣ್ಣ ಈಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ನರೇಂದ್ರ ಮೋದಿಯವರ ಸರ್ಕಾರ ದೇಶಾದ್ಯಂತ ಕೇಸರಿಕರಣ ಮಾಡಲು ಮುಂದಾಗಿದೆ. ಇದರ ಒಂದು ಭಾಗವಾಗಿ ಟೀಮ್ ಇಂಡಿಯಾ ಆಟಗಾರರಿಗೆ ಕೇಸರಿ ಬಣ್ಣದ ಜೆರ್ಸಿ ಧರಿಸುವಂತೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಕೆಲ ಮುಖಂಡರು ಕಿಡಿ ಕಾರಿದ್ದಾರೆ.