ಬಾಗಲಕೋಟೆ: ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಹಿನ್ನಲೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ರೀಡೆಯನ್ನು ಕ್ರೀಡೆಯನ್ನಾಗಿ ಸ್ವೀಕರಿಸಬೇಕು ಎನ್ನುವುದು ವಾಸ್ತವ. ಆದರೆ, ವಾಸ್ತವ ಎಲ್ಲವೂ ಸತ್ಯ ಆಗುತ್ತೋ? ಎಂದು ಪ್ರಶ್ನಿಸಿದರು. ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡುವಂತೆ ಸಮಾಜವನ್ನು ರೂಪಿಸಿದ್ದೇವಾ ಎಂಬುದನ್ನು ಮೊದಲು ನೋಡಬೇಕೆಂದರು.
ದೋಂಬಿ, ಗಲಾಟೆ, ಗದ್ದಲ ಆಯಿತು ಎಂದ್ರೆ ಶಮನ ಮಾಡಲು ಯಾರಿಂದಲೂ ಆಗಲ್ಲ. ಸಾವು, ನೋವು ಆದ ಮೇಲೆ ಯಾರಿಗೆ ಉಪದೇಶ ಕೊಡಬೇಕು? ಕ್ರೀಡೆಯನ್ನ ಕ್ರೀಡೆಯಾಗಿ ಸ್ವೀಕರಿಸುವ ಗುಣ ಕ್ರೀಡಾಳುಗಳಲ್ಲೆ ಎಷ್ಟರ ಮಟ್ಟಿಗೆ ಇದೆ? ಕ್ರೀಡಾಂಗಣದಲ್ಲೇ ಹೊಡೆದಾಡಿಕೊಳ್ಳುವುದು, ಬೈದಾಡುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಯಾರು? ಕ್ರೀಡಾಳುಗಳಲ್ಲೆ ಇಷ್ಟರ ಮಟ್ಟಿಗೆ ಇದೆ ಅಂದರೆ, ಹೊರಗೆ ಇರುವುದರಲ್ಲಿ ಅಚ್ಚರಿಯಿಲ್ಲ ಅಂದರು.
ಸಮಾಜವು ಪರಸ್ಪರ ದೊಂಬಿ, ಗಲಾಟೆಗೆ ಇಳಿದರೆ, ಅದರಿಂದಾಗುವ ಹಾನಿಗೆ ಪರಿಹಾರ ಹಾಗೂ ನಿವಾರಣೆ ಹೇಗೆ ಸಾಧ್ಯ? ಪಾಕಿಸ್ತಾನದ ಒಬ್ಬ ವ್ಯಾಪಾರಿ ಭಾರತದ ವಿರುದ್ಧ ಗೆದ್ದರೆ ಬ್ಲಾಂಕ್ ಚೆಕ್ ಕೊಡುವುದಾಗಿ ಹೇಳಿದ್ದಾನಂತೆ. ಆ ದೇಶ ಕ್ರಿಕೆಟ್ ಅನ್ನು ಹಾಗೆಯೇ ಸ್ವೀಕರಿಸಿದೆ. ಇದೊಂದು ಯುದ್ಧ ಅಂತಾ ಹೇಳಿಕೊಂಡು ಓಡಾಡುತ್ತಿವೆ ಎಂದು ಪಾಕ್ ವಿರುದ್ಧ ಕಿಡಿಕಾರಿದರು.
ನಮ್ಮಲ್ಲಿ ಸಹ ಅಲ್ಲಲ್ಲಿ ಯುವಕರ ಗುಂಪುಗಳು ಸೋಲು-ಗೆಲುವನ್ನು ಸ್ವೀಕರಿಸುವ ಪರಿ ಹೇಗಿದೆ? ಪರಸ್ಪರ ಹೊಡೆದಾಟ, ನಿಂದನೆ ಆಗ್ತಿವೆ. ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುಗಳು, ಪ್ರಜೆಗಳು, ಸಮಾಜದಲ್ಲಿ ಇದೆಯೇ? ಇಷ್ಟು ವಿಕೋಪಕ್ಕೆ ಹೋಗುತ್ತೆ ಅಂದ್ರೆ, ಅದರ(ಭಾರತ-ಪಾಕ್ ಮ್ಯಾಚ್) ಅಗತ್ಯ ಉಂಟೋ? ಇಲ್ವೋ? ಪರಿಶೀಲನೆ ಮಾಡಲಿ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದರು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…