ಇಂತಹವರು ವಂದೇ ಮಾತರಂ ಕೇಳಲೂ ಕೂಡ ಯೋಗ್ಯರಲ್ಲ : ಅಮೂಲ್ಯಗೆ ಮಹೇಶ್ ವಿಕ್ರಮ್ ಹೆಗ್ಡೆ -Vishwanews24
ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ವಂದೇ ಮಾತರಂ ಹಾಡಿ ಎಂದು ಪೀಡಿಸಿದ್ದ ಅಮೂಲ್ಯಗೆ ತಿರುಗೇಟು ನೀಡಿರುವ ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ವಂದೇ ಮಾತರಂ ಕೇಳಲೂ ಕೂಡ ಇವರು ಯೋಗ್ಯರಲ್ಲ ಎಂದು ಹೇಳಿದ್ದಾರೆ.
ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಅಮೂಲ್ಯ ವಿರುದ್ಧ ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಕಿಡಿಕಾರಿದ್ದು, ಇಂತಹವರು ವಂದೇ ಮಾತರಂ ಕೇಳಲೂ ಕೂಡ ಯೋಗ್ಯರಲ್ಲ ಎಂದು ಹೇಳಿದ್ದಾರೆ.
Today it's proved why I didn't chant Vande Mataram front of these
These don't deserve to hear even Vande Mataram
These do this drama only for publicity
Henceforth if anyone says Pak Zindabad, police shud punish brutally
They shudn't chant even P of Pak
This trend shud stop
— Mahesh Vikram Hegde (@mvmeet) February 20, 2020
ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಈ ಹಿಂದೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರಿಗೆ ವಂದೇ ಮಾತರಂ ಹಾಡುವಂತೆ ಪೀಡಿಸಿದ್ದರು. ಅಲ್ಲದೆ ವಂದೇ ಮಾತರಂ ಗೀತೆ ಹಾಡುವ ಮೂಲಕ ನಿಮ್ಮ ದೇಶಭಕ್ತಿ ತೋರಿಸಿ ಎಂದು ಕಾಡಿದ್ದಳು.
