Featured

ಇಂದಿಗೆ ಕಾಪು ಪುರಸಭೆ ಸದಸ್ಯರ ಅಧಿಕಾರ ಮುಕ್ತಾಯ…!!-vishwanews24

ಇಂದಿಗೆ ಕಾಪು ಪುರಸಭೆ ಸದಸ್ಯರ ಅಧಿಕಾರ ಮುಕ್ತಾಯ…!!

ಕಾಪು: ಕಾಪು ಪುರಸಭೆ ಘೋಷಣೆಯ ನಂತರ ಮೊದಲ ಚುನಾವಣೆಯಲ್ಲಿ ಬಿಜೆಪಿ ಹನ್ನೊಂದು ಮತ್ತು ಕಾಂಗ್ರೆಸ್ ಹನ್ನೆರಡು ಸೀಟ್ ಗೆಲ್ಲುವ ಮುಖಾಂತರ ಮೊದಲ ಬಾರಿಗೆ ಕಾಂಗ್ರೆಸ್ ಪುರಸಭೆಯ ಗದ್ದುಗೆ ಏರಿ 30 ತಿಂಗಳು ಆಡಳಿತ ನಡೆಸಿತ್ತು.
ತದನಂತರ ಸರ್ಕಾರ ಬದಲಾವಣೆ ಸಮಯದಲ್ಲಿ ಶಾಸಕ ಸಂಸದೆಯ ಮತ ಬಲದಲ್ಲಿ ಬಿಜೆಪಿ ಗದ್ದುಗೆ ಏರುವ ತಯಾರಿಯಲ್ಲಿರುವಾಗಲೇ ಅಧ್ಯಕ್ಷ ಮೀಸಲಾತಿ ಕೋರ್ಟ್ ಮೆಟ್ಟಿಲು ಏರಿದ್ದರ ಪರಿಣಾಮ ಕೇವಲ ಬಿಜೆಪಿ ಎಂಟು ತಿಂಗಳುಗಳ ಕಾಲ ಆಡಳಿತ ನಡೆಸಿತ್ತು.
ಆದರೇ ಜೂನ್ 3 ನೇ ತಾರೀಖುವಿಗೆ ಇಡೀ ಕೌನ್ಸಿಲ್ ಅಧಿಕಾರ ಕೊನೆಗೊಂಡು ಮುಂದಿನ ಚುನಾವಣೆ ಘೋಷಣೆಯಾಗಿ ನೂತನ ಕೌನ್ಸಿಲ್ ಬರುವವರೆಗೆ ಆಡಳಿತಾಧಿಕಾರಿ ಅಧಿಕಾರಿ ಚಲಾಯಿಸಲಿದ್ದಾರೆ.
ಐದು ವರ್ಷದಲ್ಲಿ ಹುಸಿಯಾದ ಭರವಸೆ
“ಪುರಸಭೆಯಾದ ನಂತರ ಕಾಪು ಪೇಟೆಯ ಕೊಳಚೆ ನೀರಿನ ಘಟಲ, ಕಾಪು ಕಲ್ಕುಡ ದೇವಸ್ಥಾನದ ಹತ್ತಿರದ ಕಸ ವಿಲೇವಾರಿ, ಕುಡಿಯುವ ನೀರು ಬಗ್ಗೆ ಸರಿಯಾದ ವ್ಯವಸ್ಥೆ,ಬೀದಿ ದೀಪದ ಸಮಸ್ಯೆ ಸೇರಿದಂತೆ ಹತ್ತಾರು ಮೂಲಭೂತ ವ್ಯವಸ್ಥೆ ಕಲ್ಪಿಸದೆ ಭರವಸೆ ಹುಸಿಯಾಗಿದೆ.”

ಡಬ್ಬಲ್ ಟ್ಯಾಕ್ಸ್ – ಜನತೆಗೆ ಲಾಭ ಇಲ್ಲ
ಗ್ರಾಮ ಪಂಚಾಯತ್ನಿಂದ ಮೇಲ್ದರ್ಜೆಗೆ ಏರಿಸಿ ಪುರಸಭೆ ಮಾಡಿದ ಪರಿಣಾಮದಿಂದಾಗಿ ಮನೆ ತೆರಿಗೆ,ಕಮರ್ಷಿಯಲ್ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳು ಪಂಚಾಯತಿಗಿಂತ ಪುರಸಭೆಗೆ ದುಪ್ಪಟ್ಟು ಏರಿಕೆಯಾದರೂ ಕೂಡ ಇದರಿಂದ ಜನತೆಗೆ ಯಾವುದೇ ಲಾಭ ಆಗಿಲ್ಲ ಅನ್ನುತ್ತಾರೆ ಜನ.

ಸೀಟ್ ಬಿಸಿ‌ ಮಾಡಿ ಹಾಗೆ ಬಂದು ಹೀಗೆ ಕೆಲವು ಸದಸ್ಯರು..!!

ಪುರಸಭೆಯ ಸುಮಾರು 38 ಸಾಮಾನ್ಯ ಸಭೆಯಲ್ಲಿ ಒಂದೇ ಒಂದು ಅಜೆಂಡಾದ ಪ್ರಶ್ನೋತ್ತರಗಳಲ್ಲಿ ತುಟಿ ಬಿಚ್ಚದೆ ಹಾಗೇ ಬಂದು ಹೀಗೆ ಹೋದ ಸದಸ್ಯರು ಕೂಡ ಇದ್ದಾರೆ ಎಂಬುದು ವಿಪರ್ಯಾಸದ ಸಂಗತಿ.

ಏನೇ ಆಗಲಿ‌ ಹಲವಾರು ವಿರೋಧದ ನಡುವೆಯೂ ಪಂಚಾಯತ್ ಮಟ್ಟದಿಂದ ಪುರಸಭೆ ಮೇಲ್ದರ್ಜೆಗೊಂಡ ಕೌನ್ಸಿಲ್ ಗೆ ಐದು ವರ್ಷ ಪೂರ್ಣಗೊಂಡು ಇಂದಿಗೆ ಅಧಿಕಾರಿ ಕೌನ್ಸಿಲ್ ನ‌ ಅಧಿಕಾರ‌ಕೊನೆಗೊಳ್ಳಲಿದೆ, ಮುಂದಿನ‌ ಚುನಾವಣೆ ನಡೆದು ಅಧಿಕಾರ ಬರುವವರೆಗೆ ಆಡಳಿತಾಧಿಕಾರಿ ಸುಪ್ರೀಮ್ ಆಗಿರುತ್ತೆ.

ವರದಿ: ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24

 

 

 

Vishwa News 24

Recent Posts

ಮಣಿಪಾಲ :ಕಂದಕಕ್ಕೆ ಉರುಳಿದ ಶಾಲಾ ಬಸ್ ; ಓರ್ವ ವಿದ್ಯಾರ್ಥಿ ಗಂಭೀರ ಗಾಯ – vishwanews24

ಮಣಿಪಾಲ :ಕಂದಕಕ್ಕೆ ಉರುಳಿದ ಶಾಲಾ ಬಸ್ ; ಓರ್ವ ವಿದ್ಯಾರ್ಥಿ ಗಂಭೀರ ಗಾಯ  ಉಡುಪಿ: ಮಣಿಪಾಲ್‌ ಬಳಿಯ ಕೊಡಂಗೆಯಲ್ಲಿ ಶಾಲಾ…

14 minutes ago

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

2 days ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

2 days ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

2 days ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

2 days ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

2 days ago