ಇಂದಿನಿಂದ ಮಂಗಳೂರು – ಮೈಸೂರು ನೂತನ ವಿಮಾನ ಸೇವೆ ಆರಂಭ -Vishwanews24
ಇಂದಿನಿಂದ ಮಂಗಳೂರು – ಮೈಸೂರು ನೂತನ ವಿಮಾನ ಸೇವೆ ಆರಂಭ -Vishwanews24
ಮಂಗಳೂರು: ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಮೈಸೂರು-ಮಂಗಳೂರು ನಡುವಿನ ನೂತನ ವಿಮಾನ ಸೇವೆ ಇಂದಿನಿಂದ ಆರಂಭವಾಗಲಿದೆ.
ವಾರದಲ್ಲಿ 4 ದಿನ ಅರಮನೆ ನಗರಿ ಮೈಸೂರು-ಕರಾವಳಿ ನಗರಿ ಮಂಗಳೂರು ನಡುವೆ ವಿಮಾನ ಹಾರಾ ಟಕ್ಕೆ ಮೆ|| ಅಲಯನ್ಸ್ ಏರ್ ಸಂಸ್ಥೆಯು ಮುಂದೆ ಬಂದಿದ್ದು, ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನು ವಾರಗಳಂದು ಅಲಯನ್ಸ್ ಏರ್ ವಿಮಾನ ಸೇವೆ ಒದಗಿಸಲಿದೆ.
ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ಮಂಗಳೂರು ಮೈಸೂರು ನಡುವೆ ವಿಮಾನ ಸೇವೆ ನೀಡಲಿದೆ. ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರದಂದು ಈ ವಿಮಾನ ಸೇವೆ ಇರಲಿದೆ.
ಮೈಸೂರು-ಮಂಗಳೂರು ನಗರಗಳ ನಡುವೆ ವಿಮಾನ ಹಾರಾಟ ಸೇವೆ ಬೇಡಿಕೆ ಹಲವು ತಿಂಗಳ ಹಿಂದಿನಿಂದಲೂ ಇತ್ತಾದರೂ, ಈ ನಡುವೆ ಕೋವಿಡ್ ನಿರ್ಬಂಧವಿದ್ದ ಕಾರಣ ಸಾಕಾರಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಏರ್ ಅಲಯನ್ಸ್ ಸೇವೆ ಒದಗಿಸಲು ಮುಂದೆ ಬಂದಿದೆ ಎಂದು ಮಂಜುನಾಥ ಹೇಳಿದರು.
