ಇಂದಿನಿಂದ 15 ದಿನಗಳ ಕಾಲ ಸೇನಾ ಕೆಲಸದಲ್ಲಿ ಮಹೇಂದ್ರ ಸಿಂಗ್ ಧೋನಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಟೀಮ್ ಇಂಡಿಯಾ  ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ಕಾಶ್ಮೀರದ ಕಣಿವೆಯಲ್ಲಿ ಗಸ್ತು ಮತ್ತು ಪಹರೆ ಕರ್ತವ್ಯವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ.

ಬುಧವಾರದಿಂದ 15 ದಿನಗಳ ಕಾಲ ಅಂದರೆ ಆಗಸ್ಟ್ 15ರವರೆಗೆ ಅವರು ವಿಕ್ಟರ್ ಫೋರ್ಸ್ ನ ಭಾಗವಾಗಿ ತಮ್ಮ 106 ಟಿಎ ಬೆಟಾಲಿಯನ್​ನೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ವೇಳೆ ಅವರು ಸೈನಿಕರ ದಿನಚರಿಯನ್ನೇ ಅನುಸರಿಸ ಲಿದ್ದಾರೆ. ಪ್ಯಾರಾ ಟ್ರೂಪರ್ ಆಗಿ ಈಗಾಗಲೆ ತರಬೇತಿ ಪಡೆದಿರುವ 38 ವರ್ಷದ ಧೋನಿಗೆ ಗಡಿ ಕಾವಲು ಕೆಲಸವೂ ತರಬೇತಿಯ ಭಾಗವಾಗಿ ರುತ್ತದೆ,

ಆರಂಭದ ಮೂರು ದಿನ ಧೋನಿಯವರಿಗೆ ಸೇನೆಯ ಪ್ರಾಥಮಿಕ ತರಬೇತಿಯನ್ನು ನೀಡಲಾಗುತ್ತದೆ. ಇದೇ ವೇಳೆ ಸೇನೆಯ ಬಗ್ಗೆ ಮಾಹಿತಿ, ಫೈರಿಂಗ್ ಸಹ ಹೇಳಿಕೊಡಲಾಗುತ್ತದೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ರಜೆ ಪಡೆದುಕೊಂಡಿರುವ ಧೋನಿ ಇಂದಿನಿಂದ ಆಗಸ್ಟ್ 15 ರ ವರೆಗೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.