ಇಡೀ ದೇಶದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಲು ಕಾರಣವಾದ ಮತದಾರರಿಗೆ ಈ ಗೆಲುವನ್ನು ಅರ್ಪಿಸಲಿದ್ದೇನೆ : ವಾರಣಾಸಿಯಲ್ಲಿ ಮೋದಿ -Vishwanews24
ಹೊಸದಿಲ್ಲಿ: ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದು ನನ್ನ ಗೆಲುವಲ್ಲ. ದೇವರ ಆಶೀರ್ವಾದದಿಂದ ಹಾಗೂ ಮತದಾರ ಪ್ರಭುಗಳ ಪ್ರೀತಿಯಿಂದ ಇಲ್ಲಿ ಗೆಲುವು ದಕ್ಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಯಾವುದೇ ಒಂದು ಚುನಾವಣೆಯಲ್ಲಿ ಅಭ್ಯರ್ಥಿಯ ಹೃದಯ ಬಡಿತ, ಆತಂಕ, ಕಾತರ ದುಪ್ಪಟ್ಟು ಇರುತ್ತದೆ. ಆದರೆ ನನಗೆ ಮಾತ್ರ ಈ ರೀತಿಯ ಯಾವುದೇ ಸಮಸ್ಯೆಗಳು ಇರಲಿಲ್ಲ. ನಾನು ಅತ್ಯಂತ ನಿಶ್ಚಿಂತೆಯಿಂದ ಇದ್ದೆ. ಇಡೀ ದೇಶವನ್ನು ಸುತ್ತಾಡಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಸಾಧ್ಯವಾಯಿತು. ನನ್ನ ನಿಶ್ಚಿಂತೆಗೆ ನೀವು, ಮತದಾರ ಪ್ರಭುತಗಳು ಕಾರಣ. ನನ್ನ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಿದ್ದಾರೆ. ಈ ಗೆಲುವನ್ನು ಮತದಾರರಿಗೆ ಅರ್ಪಿಸಲಿದ್ದೇನೆ ಎಂದು ಮೋದಿ ತಿಳಿಸಿದರು.
ಇಡೀ ದೇಶದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಲು ಕೋಟ್ಯಂತರ ಕಾರ್ಯಕರ್ತರು, ಕೋಟ್ಯಂತರ ಮತದಾರು, ಮಾತೆಯರು, ಯುವ ಸಮುದಾಯ ಕಾರಣವಾಗಿದೆ. ಎಲ್ಲ ಮತದಾರರಿಗೆ ಅಭಿನಂದನೆಗಳು ಎಂದು ಮೋದಿ ತಿಳಿಸಿದರು.
Interacting with hardworking BJP Karyakartas in Kashi. Watch. https://t.co/0BBlV3sIL7
— Narendra Modi (@narendramodi) May 27, 2019
