Featured

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಅರಂಭ , ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ..Vishwanews24

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಅರಂಭ , ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ..Vishwanews24

ಮಂಗಳೂರು: ಇತಿಹಾಸ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಈ ಬಾರಿ ತಿರುಗಾಟ ಅರಂಭಗೊಂಡಿದೆ ಇಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ದೇವರ ಗರ್ಭಗುಡಿಯ ಮುಂದೆ ಮೇಳದ ಕಲಾವಿದರಿಗೆ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಗೆಜ್ಜೆಗಳನ್ನು ನೀಡುವ ಮೂಲಕ ಈ ಬಾರಿಯ ಯಕ್ಷಗಾನ ತಿರುಗಾಟಕ್ಕೆ ಚಾಲನೆ ದೊರೆತಿದೆ.

ದುರ್ಗಾಪರಮೇಶ್ವರಿ ಅಮ್ಮನವರಿಗೆ ತಾಳ ಮದ್ದಳೆ ಹಾಗೂ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ದೇವರ ಪೆಟ್ಟಿಗೆಯೊಂದಿಗೆ ಸರಸ್ವತಿ ಸದನದಲ್ಲಿ ಚೌಕಿಗೆ ಅಗಮಿಸಿ ಬಳಿಕ ಚೌಕಿ ಪೂಜೆಯ ಬಳಿಕ ಸೇವೆಯಾಟ ಅರಂಭಗೊಂಡಿತ್ತು.ಶ್ರೀ ಕ್ಷೇತ್ರ ಕಟೀಲಿಗೆ ದೇವರ ಸೇವೆಯಾಟವನ್ನು ನೋಡಲು ಭಕ್ತ ಸಾಗರವೇ ಹರಿದುಬಂದಿತ್ತು .

ಮೇ ತಿಂಗಳ 25 ವರೆಗೆ ಯಕ್ಷಗಾನ ಸೇವೆ ನಡೆಯಲಿದೆ ಅರು ಮೇಳಗಳು ಇದ್ರೂ ಸಹ ಸುಮಾರು 20 ವರ್ಷಗಳ ಕಾಲ ಯಕ್ಷಗಾನ ಸೇವೆ ಬುಕ್ ಅಗಿವೆ. ಇದು ದೇವಿಯ ಮಹಿಮೆ ಹಾಗೂ ಹೆಮ್ಮೆಯ ವಿಷಯ 2020_21 ಸಾಲಿನ ಯಕ್ಷಗಾನ ತಿರುಗಾಟ 167 ದಿನಗಳ ಕಾಲ ನಡೆಯಲಿದೆ ಎಂದರು..

ಯಕ್ಷಗಾನ ಪ್ರಿಯೆ’ ಕಟೀಲು ಶ್ರೀ ದುರ್ಗೆಗೆ ಹೇಳುವ ಅತಿ ದೊಡ್ಡ ಯಕ್ಷಗಾನ ಸೇವೆ. ಆದ್ದರಿಂದ ಭಕ್ತರು ತಮ್ಮ ಬಯಕೆ, ಇಷ್ಟಾರ್ಥ ಸಿದ್ಧಿಗೆ ತಾಯಿಗೆ ಯಕ್ಷಗಾನ ಸೇವೆಯನ್ನು ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿ ಕಟೀಲು ಶ್ರೀ ದೇವಿಯೇ ಬರುತ್ತಾಳೆ ಎಂಬ ನಂಬಿಕೆಯಿದೆ. ಕಾರ್ತಿಕ ಬಹುಳ ಪಂಚಮಿಯಂದು ಕಟೀಲು ದೀಪೋತ್ಸವ ನಡೆಯುತ್ತದೆ. ಇದಾಗಿ ದೇವರ ತಾರಾನುಕೂಲವಾಗುವ ದಿನ ಮೇಳಗಳು ಹೊರಡುತ್ತವೆ. ವೃಷಭ ಸಂಕ್ರಮಣದ ಬಳಿಕ 11 ನೇ ದಿನದಂದು (ಮೇ 25 ರ ಸುಮಾರಿಗೆ) ವರ್ಷದ ತಿರುಗಾಟ (ಜೈತ್ರಯಾತ್ರೆ) ಮುಕ್ತಾಯವಾಗುತ್ತದೆ. ಶ್ರೀದೇವಿ ಸಮ್ಮುಖದಲ್ಲಿ ಕಲಾವಿದರು ಗಜ್ಜೆಕಟ್ಟಿ ಕುಣಿಯುತ್ತಾರೆ. ಬಳಿಕ ಕಲಾವಿದರು ದೇವಸ್ಥಾನದ ಪ್ರಾಂಗಣದಲ್ಲಿನ ಆರೂ ರಂಗಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶಿಸುತ್ತಾರೆ. ಬಳಿಕ ಆರು ಮೇಳಗಳ ತಿರುಗಾಟ ಮುಂದಿನ ಆರು ತಿಂಗಳ ಕಾಲ ನೆರವೇರುತ್ತದೆ.

ಕಟೀಲು ಮೇಳದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಒಂದೊಂದು ಮೇಳಗಳಲ್ಲಿಯೂ ವರ್ಷಕ್ಕೆ ಕನಿಷ್ಠ 90-100 ರಷ್ಟು ಇದೇ ಪ್ರಸಂಗವನ್ನು ಆಡಿಸಲಾಗುತ್ತದೆ. ಉಳಿದಂತೆ ‘ಶ್ರೀದೇವಿ ಲಲಿತೋಪಾಖ್ಯಾನ’, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಆಡಿಸಲಾಗುತ್ತದೆ.

ಕಟೀಲು ದೇವಳದ ಅರ್ಚಕರಾದ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಕಲೆಯ ಮೂಲಕ ಆರಾಧನೆ ಮಾಡುವ ದೃಷ್ಟಿಯಿಂದ ಅತ್ಯಂತ ಶಿಸ್ತುಬದ್ಧವಾದ ಹಾಗೂ ರಾತ್ರಿಯಲ್ಲೂ ಎಚ್ಚರಿಕೆಯಿಂದ ಇರಿಸುವ ಕಲೆ ಯಕ್ಷಗಾನ. ಕಟೀಲು ಶ್ರೀದುರ್ಗೆಗೆ ಯಕ್ಷಗಾನವೆಂದರೆ ಬಲು ಪ್ರೀತಿ. ದೇವಳದ ಕವಾಟ ಬಂಧನದ ಬಳಿಕ ದೇವಿಯು ಯಕ್ಷಗಾನ ನೋಡಲೆಂದು ತೆರಳುತ್ತಾಳೆಂಬುದು ನಂಬಿಕೆ. ಆದ್ದರಿಂದ ಎಲ್ಲರು ತಮ್ಮ ಮನೆಗೆ ಕಟೀಲು ಮಾತೆ ಆಗಮಿಸಬೇಕೆಂದು ಯಕ್ಷಗಾನ ಪ್ರದರ್ಶನ ಮಾಡುವ ಮೂಲಕ ದೇವಿಯ ಆರಾಧನೆ ಮಾಡುತ್ತಾರೆ ಎಂದರು.

ಕಟೀಲು ಯಕ್ಷಗಾನ ಮಂಡಳಿಯಲ್ಲಿ ಆರು ಮೇಳಗಳಿದ್ದರೂ 20 ವರ್ಷಕ್ಕೆ ಯಕ್ಷಗಾನ ಮುಂಗಡ ಬುಕ್ಕಿಂಗ್ ಆಗಿದೆ. ನಿನ್ನೆಯಿಂದ ಮೇಳದ ತಿರುಗಾಟ ಆರಂಭವಾಗಿದ್ದು, ಮುಂದಿನ 167 ದಿನಗಳ ಕಾಲ ಯಕ್ಷಗಾನ ತಿರುಗಾಟ ನಡೆಯುತ್ತದೆ. ವೃಷಭ ಮಾಸದ ಹನ್ನೊಂದನೇ ದಿನ ದೇವರು ಒಳ ಪ್ರವೇಶಿಸುತ್ತಾರೆ. ಅದಕ್ಕಿಂತ ಮೊದಲು ದೇವರಿಗೆ ಒಳ ಪ್ರವೇಶವಿಲ್ಲ ಎಂದು ಹೇಳಿದರು.

Vishwa News 24

Recent Posts

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

5 minutes ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

17 minutes ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

35 minutes ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

41 minutes ago

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ – ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ- vishwanews24

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…

49 minutes ago

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ: ಉಡುಪಿ ಜಿಲ್ಲಾ ಘಟಕ “ಪ್ರಭಾವಿ ಜಿಲ್ಲೆ” ಘೋಷಣೆ – vishwanews24

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ: ಉಡುಪಿ ಜಿಲ್ಲಾ ಘಟಕ “ಪ್ರಭಾವಿ ಜಿಲ್ಲೆ” ಘೋಷಣೆ ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ…

1 hour ago