ಇತಿಹಾಸ ಪ್ರಸಿದ್ಧ ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಫೆಬ್ರವರಿ 5 ರಿಂದ 11 ರವರೆಗೆ ಅಷ್ಠಬಂಧ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹಾರಥೋತ್ಸವ ಸಂಭ್ರಮ.

Featured, ಉಡುಪಿ

ಇತಿಹಾಸ ಪ್ರಸಿದ್ಧ ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಫೆಬ್ರವರಿ 5 ರಿಂದ 11 ರವರೆಗೆ ಅಷ್ಠಬಂಧ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹಾರಥೋತ್ಸವ ಸಂಭ್ರಮ.

ಕಾಪು: ಉಡುಪಿ ಜಿಲ್ಲೆಯ ಕಾರಣಿಕ ಹಾಗೂ ಇತಿಹಾಸ ಪ್ರಸಿದ್ಧ ಕಟಪಾಡಿ ಸಮೀಪದ ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯವು ಸಂಪೂರ್ಣ ಜೀರ್ಣೋದ್ಧಾರ ಗೊಂಡು ಅಷ್ಠಬಂಧ ಸಹಿತ ಬ್ರಹ್ಮಕಲಶೋತ್ಸವ ಹಾಗೂ ಮಹಾರಥೋತ್ಸವವು ದೇವಸ್ಥಾನದ ತಂತ್ರಿಗಳಾದ ಕೊಡವೂರು ಕಂಬಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಇದೇ ಬರುವ ತಾರೀಕು ಫೆಬ್ರವರಿ 5 ರಿಂದ ಮೊದಲ್ಗೊಂಡು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಫೆಬ್ರವರಿ 11 ರಂದು ಸಂಪನ್ನ ಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.