ಹೊಸದಿಲ್ಲಿ,: ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯದ ಮತದಾನದಿಂದ ಹೊರಗುಳಿಯುವ ಮೂಲಕ ಕೇಂದ್ರದಲ್ಲಿ ಆಡಳಿತಾರೂಢ ಎನ್ ಡಿಎ ಅಂಗಪಕ್ಷವಾಗಿರುವ ಶಿವಸೇನೆ ಮತ್ತೆ ಬಿಜೆಪಿಗೆ ಮುಜುಗರ ಉಂಟುಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಶಿವಸೇನೆ ರಾಹುಲ್ ಭಾಷಣವನ್ನು ಶ್ಲಾಘಿಸಿದೆ. ಭಾಷಣದ ಕೊನೆಯಲ್ಲಿ ರಾಹುಲ್, ಪ್ರಧಾನಿ ಮೋದಿಯವರನ್ನು ಆಲಂಗಿಸಿಕೊಂಡ ಕ್ರಮವನ್ನು ಬಿಜೆಪಿ ಹಾಗೂ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಟೀಕಿಸಿದ್ದರು.
“ರಾಹುಲ್‍ಗಾಂಧಿಯವರು ರಿಯಲ್ ಸ್ಕೂಲ್ ಆಫ್ ಪೊಲಿಟಿಕ್ಸ್‍ನಿಂದ ಪದವಿ ಪಡೆದಿದ್ದಾರೆ” ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಬಣ್ಣಿಸಿದರು.
ರಾಜಕೀಯವಾಗಿ ಮಗು ಎಂದು ಇತರ ಎನ್‍ಡಿಎ ಮಿತ್ರಪಕ್ಷಗಳು ರಾಹುಲ್ ಅವರನ್ನು ಕಡೆಗಣಿಸುತ್ತಿದ್ದರೆ, ರಾಹುಲ್ ಗೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಬಹಿರಂಗವಾಗಿ ಹೇಳಿದ ಮೊಟ್ಟಮೊದಲ ವಿರೋಧ ಪಕ್ಷ ಇದಾಗಿದೆ. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲ ರಾಹುಲ್ ಅವರ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಲೇವಡಿ ಮಾಡುತ್ತಿದ್ದರೆ, ಶಿವಸೇನೆ ಅವರ ಬೆಂಬಲಕ್ಕೆ ನಿಂತಿತ್ತು.
ರಾಹುಲ್ ಅವರ ಈ ಅನಿರೀಕ್ಷಿತ ಕ್ರಮ ಮೋದಿಯವರಿಗೂ ಶಾಕ್ ನೀಡಿದೆ. “ಇದು ಮೋದಿಗೆ ಅಪ್ಪುಗೆಯಲ್ಲ; ಆಘಾತ” ಎಂದು ಎದುರಾಳಿಗಳಿಗೆ ರಾವತ್ ಎದುರೇಟು ನಿಡಿದ್ದಾರೆ. ಇದು ನಾಟಕ ಎಂದು ಜನ ಹೇಳುತ್ತಾರೆ. ಆದರೆ ರಾಜಕೀಯದಲ್ಲಿ ನಾಟಕವೂ ಇರುತ್ತದೆ ಎಂದು ರಾವತ್ ಹೇಳಿದ್ದಾರೆ. ಕೊನೆಕ್ಷಣದಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಭಾಗವಹಿಸುವುದರಿಂದ ದೂರ ಇರುವ ನಿರ್ಧಾರವನ್ನು ಶಿವಸೇನೆ ಪ್ರಕಟಿಸಿತ್ತು.
ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…
ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…
ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…
ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…
25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…
ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]