ಇನ್ನಂಜೆ: ಹೊಳೆ ಬದಿಗೆ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿದ ಗ್ರಾಪಂ ಅಧ್ಯಕ್ಷೆ – vishwanews24

Featured, ಉಡುಪಿ

ಇನ್ನಂಜೆ: ಹೊಳೆ ಬದಿಗೆ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿದ ಗ್ರಾಪಂ ಅಧ್ಯಕ್ಷೆ

ಶಿರ್ವ: ಇನ್ನಂಜೆ ಗ್ರಾಪಂ ವ್ಯಾಪ್ತಿಯ ಮರ್ಕೋಡಿ ಎಂಬಲ್ಲಿ ಹೊಳೆ ಬದಿಗೆ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಮನೆಯ ತ್ಯಾಜ್ಯವನ್ನು ಬಾಡಿಗೆ ವಾಹನದಲ್ಲಿ ತಂದು ಸುರಿದು ಹೋಗಿರುವ ಬಗ್ಗೆ ಸ್ಥಳೀಯರು ಗ್ರಾಪಂ ಗಮನಕ್ಕೆ ತಂದಿದ್ದು, ಗ್ರಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ ಸಹಿತ ಆ ಭಾಗದ ವಾರ್ಡ್ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಎಸೆದ ಕಸದಲ್ಲಿದ್ದ ಕಾಗದ, ಪಾರ್ಸೆಲ್‌ಗಳ ಮೇಲಿನ ವಿಳಾಸ ಹಾಗೂ ಮೊಬೈಲ್ ನಂಬರ್‌ಗೆ ಕರೆ ಮಾಡಿದರು.

ವಾಯುಭಾರ ಕುಸಿತ : ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ ; ಯೆಲ್ಲೊ ಅಲರ್ಟ್ ಘೋಷಣೆ – vishwanews24

ಕಸ ಎಸೆದ ಕಟಪಾಡಿ ಮೂಲದ ಮನೆಯ ಮಾಲಿಕರನ್ನು ಪತ್ತೆ ಹಚ್ಚಿ, ಈ ಬಗ್ಗೆ ಕಾಪು ಪೋಲಿಸ್ ಠಾಣೆಗೆ ಗ್ರಾಪಂ ಅಧ್ಯಕ್ಷರು ದೂರು ನೀಡಿದರು. ಸಂಜೆಯ ವೇಳೆಗೆ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿ, ವಾಹನಕ್ಕೆ ತುಂಬಿಸಿ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಎಸೆದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಲಕೋಟೆಗಳು, ಮನೆಯ ಕಸ, ಬಿಯರ್ ಬಾಟಲ್, ಹೆಣ್ಣುಮಕ್ಕಳ ಒಳ ಉಡುಪು ಸಹಿತ ಇನ್ನಿತರ ವಸುತಿಗಳಿದ್ದವು.

ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಪಂ ಸದಸ್ಯರಾದ ನಿಕೇಶ್, ದ್ವಿವೇಶ್ ಕಾಪು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳೀಯ ಸಮಾಜ ಸೇವಕರಾದ ಉಮೇಶ್ ಅಂಚನ್, ವರುಣ್ ಶೆಟ್ಟಿ, ರಮೇಶ್ ಮೊದಲಾದವರು ಹಾಜರಿದ್ದರು.

ಮುರುಡೇಶ್ವರ : ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರ ಸಾವು ಪ್ರಕರಣ ; 7 ಮಂದಿ ಶಿಕ್ಷಕರು ಪೊಲೀಸ್‌ ವಶಕ್ಕೆ – vishwanews24

Leave a Reply