Featured

ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸ್ಯಾಪ್ ಬಳಕೆ ಸಾಧ್ಯವಿಲ್ಲ !! ಆ ಫೋನುಗಳು ಯಾವುದು ? ಹಾಗಾದರೆ ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವುದು ನಿಜನಾ..?? ಓದಿ ಈ ವರದಿ..

ಹೊಸದಿಲ್ಲಿ, : ಐಒಎಸ್-6 ಸಪೋರ್ಟ್ ಹೊಂದಿದ ಐಫೋನ್ ಗಳಿಗೆ ವಾಟ್ಸ್ಯಾಪ್ ಸೇವೆಗಳು ಇತ್ತೀಚೆಗೆ ಅಂತ್ಯಗೊಳಿಸಲಾಗಿದ್ದರೆ, ಸೆಪ್ಟೆಂಬರ್ 20ರಿಂದ ಐಒಎಸ್7 ಸಪೋರ್ಟ್ ಹೊಂದಿದ ಐಫೋನ್ ಗಳಿಗೂ ವಾಟ್ಸ್ಯಾಪ್ ಸೌಲಭ್ಯ ದೊರೆಯುವುದಿಲ್ಲ.

ಐಒಎಸ್ 7 ಸಪೋರ್ಟ್ ಹೊಂದಿದ ಐಫೋನ್ ಹೊಂದಿರುವವರು ಇನ್ನು ಮುಂದೆ ವಾಟ್ಸ್ಯಾಪ್ ಅನ್ನು ಡೌನ್‍ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಈಗಾಗಲೇ ತಮ್ಮ ಐಫೋನ್ 4ಗಳಲ್ಲಿ ವಾಟ್ಸ್ಯಾಪ್ ಅಳವಡಿಸಿರುವವರಿಗೆ ಈ ಹೊಸ ನಿಯಮ ಅನ್ವಯವಾಗದು. ಹೊಸದಾಗಿ ಡೌನ್‍ಲೋಡ್ ಮಾಡುವುದು ಮಾತ್ರ ಇಂತಹ ಸಾಧನಗಳನ್ನು ಹೊಂದಿದವರಿಗೆ ಸಾಧ್ಯವಿಲ್ಲ.

ಐಫೋನ್ 4 ಈಗಲೂ ಐಒಎಸ್8 ಸಪೋರ್ಟ್ ಹೊಂದಿದ ಕಂಪೆನಿಯ ಕೊನೆಯ ಫೋನ್ ಆಗಿದೆ. ಆದರೆ ಎಲ್ಲಾ ಐಫೋನ್4 ಬಳಕೆದಾರರು ವಾಟ್ಸ್ಯಾಪ್ ಅನ್ನು 2020ರ ತನಕ ಉಪಯೋಗಿಸಬಹುದಾದರೂ ಅವರಿಗೆ ಈ ಆಯಪ್ ಅನ್ನು ಮರು ಇನ್‍ಸ್ಟಾಲ್ ಮಾಡುವುದು ಅಥವಾ ಅಪ್‍ಡೇಟ್ ಮಾಡುವುದು ಅಸಾಧ್ಯ.

ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಐಒಎಸ್ 7 ಮತ್ತು ಹಳೆಯ ಅವತರಣಿಕೆಗಳಲ್ಲಿ ಕಾರ್ಯನಿರ್ವಹಿಸುವುದು ನಿಲ್ಲಿಸಲಿದೆ.

ನೋಕಿಯಾ ಸಿಂಬಿಯನ್ ಎಸ್ 60, ವಿಂಡೋಸ್ ಫೋನ್ 8.0, ಬ್ಲ್ಯಾಕ್‍ಬೆರ್ರಿ ಒಎಸ್ ಮತ್ತು ಹಳೆಯ ತಂತ್ರಜ್ಞಾನಗಳ ಆಧರಿತ ಸಾಧನಗಳಲ್ಲಿ ವಾಟ್ಸ್ಯಾಪ್ ಕಾರ್ಯನಿರ್ವಹಿಸುವುದು ಈಗಾಗಲೇ ನಿಂತಿದೆ. ಅಂತೆಯೇ ಆಂಡ್ರಾಯ್ಡ್ 2.3.7 ಮತ್ತು ಹಳೆಯ ಅವತರಣಿಕೆಗಳಿಗೂ ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಸಪೋರ್ಟ್ ಅಂತ್ಯಗೊಳ್ಳಲಿದೆ.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

3 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

3 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

3 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

3 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

3 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

3 days ago