ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ವಿರಾಟ್ ಬಾಲಿವುಡ್‍ಗೆ ಪ್ರವೇಶಿಸಿದ್ದಾರಾ ಎಂದು ಯೋಚಿಸುತ್ತಿದ್ದಾರೆ.
ವಿರಾಟ್ ಇಂದು ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಆ ಪೋಸ್ಟರ್ ಗೆ ‘ಟ್ರೈಲರ್- ದಿ ಮೂವಿ’ ಎಂದು ಹೆಸರಿಡಲಾಗಿದೆ. ಸದ್ಯ ವಿರಾಟ್ ಈ ಪೋಸ್ಟರ್ ಶೇರ್ ಮಾಡಿ ಅದಕ್ಕೆ, “10 ವರ್ಷಗಳ ನಂತರ ಮತ್ತೊಂದು ಡೆಬ್ಯೂ” ಎಂದು ಕ್ಯಾಪ್ಷನ್ ನೀಡಿದ್ದಾರೆ.
ವಿರಾಟ್ ಅವರ ಟ್ರೈಲರ್-ದಿ ಮೂವಿ ಪೋಸ್ಟರ್ ಮೇಲೆ ಇನ್ಟ್ರಡ್ಯೂಸಿಂಗ್ ವಿರಾಟ್ ಕೊಹ್ಲಿ ಎಂದು ಬರೆಯಲಾಗಿದೆ. ಅಲ್ಲದೇ ಈ ಪ್ರೊಡಕ್ಷನ್ ಅನ್ನು ವಿರಾಟ್ ಅವರ ವ್ರಾಂಗ್ ಸಂಸ್ಥೆ ಪ್ರೊಡಕ್ಷನ್ ಮಾಡಲಿದೆ. ಈ ಪೋಸ್ಟರ್ ಕೆಳಭಾಗದಲ್ಲಿ ಸೆಪ್ಟೆಂಬರ್ 28, 2018 ಬಿಡುಗಡೆ ಎಂದು ಕೂಡ ಬರೆಯಲಾಗಿದೆ.
ಈ ಪೋಸ್ಟರ್ ನಲ್ಲಿ ವಿರಾಟ್ ಇಂಟೇನ್ಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅವರ ಕಾಲು ಗಾಳಿಯಲ್ಲಿ ತೇಲಾಡುತ್ತಿದೆ. ಪೋಸ್ಟರ್ ನಲ್ಲಿ ವಿರಾಟ್ ಹಿಂದೆ ಸ್ಫೋಟಗೊಂಡ ಬೆಂಕಿಯ ಬ್ಯಾಕ್‍ಗ್ರೌಂಡ್ ಇದೆ. ಈ ಪೋಸ್ಟರ್ ನೋಡಿದರೆ, ವಿರಾಟ್ ಆ್ಯಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ವಿರಾಟ್ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬುದು ಅಧಿಕೃತವಾಗಿಲ್ಲ. ಈ ಪೋಸ್ಟರ್ ನೋಡಿ ಕೆಲವರು ವಿರಾಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ವ್ರಾಂಗ್ ಬ್ರಾಂಡ್‍ನ ಜಾಹೀರಾತಿಗಾಗಿ, ಪ್ರಚಾರಕ್ಕಾಗಿ ಈ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…