Featured

ಇನ್ನೂ ಸಾವಿರಾರು ಕೇಸುಗಳನ್ನು ಹಾಕಿದರೂ ನನ್ನ ಹಿಂದುತ್ವದ ಧ್ವನಿಯನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ : ಪ್ರಮೋದ್ ಮುತಾಲಿಕ್ -Vishwanews24

ಬೆಂಗಳೂರು: ಭಯೋತ್ಪಾದನೆಯನ್ನೇ ಉಸಿರಾಡುತ್ತಿರುವ ಪಾಕಿಸ್ತಾನವನ್ನು ಸಾಕಿ, ಪೋಷಿಸಿರುವ ಕಾಂಗ್ರೆಸ್​ ಪಕ್ಷದ ಮೈಗೆ ಜಮ್ಮು ಕಾಶ್ಮೀರದಲ್ಲಿ ಸತ್ತಿರುವ 42 ಸಾವಿರ ಜನರ ರಕ್ತ ಅಂಟಿಕೊಂಡಿದೆ. ಆ ಪಾಪದಿಂದ ಕಾಂಗ್ರೆಸ್​ ಎಂದಿಗೂ ಮುಕ್ತಿ ಹೊಂದಲಾರದು ಎನ್ನುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಇಂದು ಹಿಂದುತ್ವದ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಜಮ್ಮು ಕಾಶ್ಮೀರದಲ್ಲಿ ಸಾವನ್ನಪ್ಪಿದ 42,000 ಸೈನಿಕರು, ಪೊಲೀಸರು, ನಾಗರಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಅವರನ್ನು ಕೊಂದ ರಕ್ತ ಕಾಂಗ್ರೆಸ್​ ಮೈಗೆ ಅಂಟಿಕೊಂಡಿದೆ. ಅತ್ಯಂತ ಚಿಕ್ಕದಾಗಿರುವ ಪಾಕಿಸ್ತಾನವನ್ನು ಪೋಷಿಸಿ, ಬೆಳೆಸಿ ಕಾಂಗ್ರೆಸ್​ ಮಾಡಿರುವ ಅನಾಹುತ ಎಷ್ಟೆಂಬುದರ ಅರಿವು ಯಾರಿಗಾದರೂ ಇದೆಯಾ?

ಇಡೀ ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕಿಸಿ, ಪೋಷಿಸಿದ ಕಾಂಗ್ರೆಸ್​ ಅನ್ನು ಬಗ್ಗುಬಡಿದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದರಿಂದ ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ. ಈ ಸಭೆಯಲ್ಲಿದ್ದವರು ಪಾಕಿಸ್ತಾನದತ್ತ ತಿರುಗಿ ಮೂತ್ರ ವಿಸರ್ಜನೆ ಮಾಡಿದರೂ ಪಾಕ್​ ಮುಳುಗಿ ಹೋಗುತ್ತದೆ. ಅಂತಹ ದೇಶ ನಮ್ಮ ದೇಶದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂದು ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ನಾನೇನು ರೇಪ್​ ಮಾಡಲಿಲ್ಲ, ವಂಚನೆ ಮಾಡಲಿಲ್ಲ, ಇಸ್ಪೀಟ್ ಆಡಲಿಲ್ಲ, ಖೋಟಾ ನೋಡು ಪ್ರಿಂಟ್ ಮಾಡಲಿಲ್ಲ. ಹಿಂದುತ್ವ, ಗೋಮಾತೆ ಹೆಸರು ಹೇಳಿದ್ದಕ್ಕೆ ನಿರ್ಲಜ್ಜ ರಾಜಕಾರಣಿಗಳು ನನ್ನ ವಿರುದ್ಧ 106 ಕೇಸುಗಳನ್ನು ಹಾಕಿದ್ದಾರೆ. ಇನ್ನೂ ಸಾವಿರಾರು ಕೇಸುಗಳನ್ನು ಹಾಕಿದರೂ ನನ್ನ ಹಿಂದುತ್ವದ ಧ್ವನಿಯನ್ನು ಯಾರಪ್ಪನಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಮುತಾಲಿಕ್ ಗುಡುಗಿದ್ದಾರೆ.

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

7 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

7 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago