ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ : ಕೇಂದ್ರ ಸರ್ಕಾರದಿಂದ ಹೊಸ ಗೈಡ್ಲೈನ್ಸ್ – vishwanews24
ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ : ಕೇಂದ್ರ ಸರ್ಕಾರದಿಂದ ಹೊಸ ಗೈಡ್ಲೈನ್ಸ್
ಹೊಸದಿಲ್ಲಿ: ಎಲ್ಲಾ ಶಾಲೆಗಳು ಸೇರಿದಂತೆ ಸರಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಶಾಲೆಗಳಲ್ಲಿ ರಾಷ್ಟ್ರಗೀತೆಗೂ ಮೊದಲು ‘ವಂದೇ ಮಾತರಂ’ನ 6 ಚರಣಗಳನ್ನು ಹಾಡಬೇಕು. ಹಾಗೆಯೇ ಗೀತೆಯನ್ನು ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
2025ರ ಡಿಸೆಂಬರ್‌ನಲ್ಲಿ ‘ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ನೂತನ ಆದೇಶದ ಪ್ರಕಾರ ಪದ್ಮ ಪ್ರಶಸ್ತಿಗಳು ಸೇರಿದಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಹಾಗೂ ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ಶಾಲಾ ಸಭೆಗಳಲ್ಲಿ ವಂದೇ ಮಾತರಂ ನುಡಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ:
ಉಡುಪಿ: ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಯೋಗೇಶ್ ವಿ ಶೆಟ್ಟಿ ಮೂರನೇ ಬಾರಿಗೆ ಪುನರಾಯ್ಕೆ – vishwanews24
ಮಾರ್ಗಸೂಚಿಯಲ್ಲಿ ಏನಿದೆ?
ಜನಗಣಮನಕ್ಕಿರುವ ಗೌರವ ವಂದೇ ಮಾತರಂಗೂ ನೀಡಬೇಕು. ರಾಷ್ಟ್ರ ಗೀತೆಗೂ ಮೊದಲು ಇನ್ಮುಂದೆ ವಂದೇ ಮಾತರಂ ಕೂಡ ಕಡ್ಡಾಯವಾಗಿರುತ್ತೆ. ಶಾಲೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಹಾಡಬೇಕು. ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಿಗೂ ಅನ್ವಯಿಸುತ್ತದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ ಎಂದಿದೆ. ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸುವುದು ಕಡ್ಡಾಯವಲ್ಲ ಅಂತ ಕೂಡ ಹೇಳಿದೆ. ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನ ವಂದೇ ಮಾತರಂ ಗೀತೆಗೆ ವಿಸ್ತಾರಿಸಲಾಗಿದೆ. ರಾಷ್ಟ್ರಗೀತೆಗೆ ಅಡ್ಡಿಪಡಿಸಿ, ಗೌರವಿಸುವುದನ್ನ ತಡೆದ ವ್ಯಕ್ತಿಗೆ 3 ವರ್ಷ ಜೈಲು ಎಂಬ ಕಾನೂನು ಘೋಷಣೆಯಾಗಿದೆ.
ಎಲ್ಲೆಲ್ಲಿ ಗೈಡ್ಲೈನ್ಸ್? ಕಡ್ಡಾಯ?
ವಂದೇ ಮಾತರಂ ಗೀತೆಯನ್ನ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ. ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಲ್ಲಿ ಹಾಡಲೇ ಬೇಕು ಅಂತ ಕೇಂದ್ರ ಹೇಳಿದೆ. ಸಿನಿಮಾ ಮಂದಿರಗಳಲ್ಲಿ.. ಯಾವುದೇ ಖಾಸಗಿ ಸಮಾರಂಭದಲ್ಲಿ. ಧಾರ್ಮಿಕ ಅಥವಾ ಸಾಮಾಜಿಕ ಸಭೆಯಲ್ಲಿ ಕಡ್ಡಾಯವಲ್ಲ ಅಂತ ಸೂಚಿಸಲಾಗಿದೆ.
ಇದನ್ನೂ ಓದಿ:
ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ : ಆದಿತ್ಯನಾಥ್ – vishwanews24
