ಇನ್ಮುಂದೆ ಪ್ರತಿ ತಿಂಗಳು ಸಪ್ತಪದಿ ಸಾಮೂಹಿಕ ವಿವಾಹ : ಕೋಟಾ ಶ್ರೀನಿವಾಸ ಪೂಜಾರಿ -Vishwanews24
ಇನ್ಮುಂದೆ ಪ್ರತಿ ತಿಂಗಳು ಸಪ್ತಪದಿ ಸಾಮೂಹಿಕ ವಿವಾಹ : ಕೋಟಾ ಶ್ರೀನಿವಾಸ ಪೂಜಾರಿ -Vishwanews24
ಉಡುಪಿ: ರಾಜ್ಯ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಇನ್ಮುಂದೆ ಪ್ರತಿ ತಿಂಗಳು ನಡೆಯಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಲವ್ ಜಿಹಾದ್ ನಿಯಂತ್ರಣಕ್ಕೆ ತರುವ ಕಾಯ್ದೆ ಜಾರಿಗೆ ತರಬೇಕೆಂದು ಮುಂದಾಗಿದೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದಿಲ್ಲ. ಕಾನೂನು ತರಬೇಕೆಂಬುದು ನಮ್ಮ ಪಕ್ಷದ, ಧರ್ಮದ, ಸಾರ್ವಜನಿಕರ ಆಶಯ. ಮುಂದಿನ ದಿನಗಳಲ್ಲಿ ಈ ಕುರಿತಾದ ಕಠಿಣ ಕಾನೂನು ಜಾರಿಗೆ ತರುತ್ತೇವೆ ಎಂದರು.
