ಕೋಟ: ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಂದ ಜಾಹೀರಾತು ನಂಬಿ, ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಯುತಿಯೊಬ್ಬಳು 60 ಸಾವಿರಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮನೆಯಲ್ಲಿಯೇ ಇದ್ದು ಮೊಬೈಲ್ ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರು ಒಂದು ಲಿಂಕ್ ಅನ್ನು ಅಕ್ಷತಾ(26 ವರ್ಷ) ಎಂಬಾಕೆ ಸ್ವೀಕರಿಸಿದ್ದರು. ಅದರಂತೆ ಅಕ್ಷತಾ ಲಿಂಕ್ ಒತ್ತಿದಾಗ ಅದು ಒಂದು ವಾಟ್ಸಪ್ ನಂಬರ್ ಗೆ ಸಂಪರ್ಕಗೊಂಡಿತ್ತು. ಅದರಲ್ಲಿ ಮೊಬೈಲ್ ನಲ್ಲಿ ಮಾಡುವ ಕೆಲಸದ ಬಗ್ಗೆ ಮಾಹಿತಿ ನೀಡಿದ್ದರು.
ಆರಂಭದಲ್ಲಿ ನೋಂದಣಿ ಶುಲ್ಕ ಎಂದು ಅಕ್ಷತಾ ಪೋನ್ ಪೇ ಮೂಲಕ 100 ರೂ. ಸಂದಾಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಬೋನಸ್ ಎಂದು 60 ರೂಪಾಯಿ ಅಕ್ಷತಾಗೆ ನೀಡಲಾಗಿತ್ತು. ಹೀಗೆ ಒಂದೇ ದಿನ 1,615 ರೂಪಾಯಿ ಅವರು ಪಾವತಿ ಮಾಡಿದ್ದರು.
ನಂತರ 1/09/2024ರಂದು ಜಾಹೀರಾತುದಾರರು 9 ಆರ್ಡರ್ ಗಳನ್ನು ಮುಗಿಸುವಂತೆ ತಿಳಿಸಿ, ಮೊದಲಿಗೆ 500 ರೂ. ಪಾವತಿಸಿ ಅಕ್ಷತಾ ಕೆಲಸ ಆರಂಭಿಸಿದ್ದು, ಪ್ರತಿಯೊಂದು ಆರ್ಡರ್ ಗೂ ಹಣ ಪಾವತಿಸಲು ಅವರು ತಿಳಿಸಿದ್ದು, ಅದರಂತೆ ಅಕ್ಷತಾ ಒಟ್ಟು 67,330 ರೂಪಾಯಿ ಹಣ ಪಡೆದು ತನಗೆ ವಂಚನೆ ಮಾಡಿರುವುದಾಗಿ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…