Featured

ಬೆಂಗಳೂರು:  ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆ ಮಾರ್ಗ ಬದಲಾವಣೆ – vishwanews24

ಬೆಂಗಳೂರು:  ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆ ಮಾರ್ಗ ಬದಲಾವಣೆ

ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಪುಲಿಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೆ.11 ರಂದು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮತ್ತು ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಟ್ಯಾನರಿ ರಸ್ತೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸುಗಮ ಸಂಚಾರಕ್ಕಾಗಿ ಮಧ್ಯಾಹ್ನ 12.30ರಿಂದ ರಾತ್ರಿ 1 ರವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿರ್ಬಂಧ:
* ನಾಗವಾರ ಮುಖ್ಯರಸ್ತೆ, ಟ್ಯಾನರಿ ರಸ್ತೆ, ಡೇವಿಸ್‌ ರೋಡ್‌ ಮುಖ್ಯರಸ್ತೆ
* ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ ಮೂಲಕ ಟ್ಯಾನರಿ ರಸ್ತೆ ಕಡೆಗೆ
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್‌ ಕಡೆಗೆ ಹೋಗುವ ಮಾರ್ಗ
* ರೋಜರ್ಸ್ ರಸ್ತೆ, ಆಮ್‌ರ್‍ಸ್ಟ್ರಾಂಗ್‌ ರಸ್ತೆ ಹಾಗೂ ಹಾಲ್‌ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಮಾರ್ಗ
* ಮಾಸ್ಕ್‌ ಜಂಕ್ಷನ್‌ನಿಂದ ಕ್ಲಾರೆನ್ಸ್‌ ಬ್ರಿಡ್ಜ್‌ ಮೂಲಕ ಪಾಟರಿ ರಸ್ತೆ ಕಡೆಗೆ
* ಲಾಜರ್‌ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಿಂದ ಸಿಂಧಿ ಕಾಲೊನಿ ಜಂಕ್ಷನ್‌, ಬುದ್ಧ ವಿಹಾರ ರಸ್ತೆ
* ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್‌ ಮೆಮೋರಿಯಲ್‌ ಜಂಕ್ಷನ್‌ ಕಡೆಗೆ ದ್ವಿಮುಖ ಸಂಚಾರ ಬದಲಾವಣೆ
* ಸಿಂಧಿ ಕಾಲೊನ ಜಂಕ್ಷನ್‌ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ

ಪರ್ಯಾಯ ಮಾರ್ಗ
>> ಥಣಿಸಂದ್ರ ಮುಖ್ಯ ರಸ್ತೆಯಿಂದ ಪುಲಿಕೇಶಿನಗರ, ಶಿವಾಜಿನಗರದ ಕಡೆಗೆ : ಥಣಿಸಂದ್ರ ಮುಖ್ಯರಸ್ತೆ, ನಾಗವಾರ ಜಂಕ್ಷನ್‌ ಎಡ ತಿರುವು, ಹೆಣ್ಣೂರು ಜಂಕ್ಷನ್‌ ಬಲ ತಿರುವು, ಎಚ್‌ಬಿಆರ್‌ 80 ಅಡಿ ರಸ್ತೆ, ಸಿದ್ದಪ್ಪರೆಡ್ಡಿ ಜಂಕ್ಷನ್‌, ಅಯೋಧ್ಯ ಜಂಕ್ಷನ್‌, ಲಿಂಗರಾಜಪುರ ಫ್ಲೆತ್ರೖಓವರ್‌ನಿಂದ ಎಚ್‌.ಎಂ.ರೋಡ್‌, ಡೇವಿಸ್‌ ರೋಡ್‌, ಪುಲಿಕೇಶಿನಗರ ಸಂಚಾರ ಪೊಲೀಸ್‌ ಠಾಣೆ ಮಾರ್ಗವಾಗಿ ಸಂಚರಿಸಬಹುದು.

>> ಟ್ಯಾನರಿ ಮುಖ್ಯ ರಸ್ತೆಯಿಂದ ಥಣಿಸಂದ್ರ ಕಡೆಗೆ: ಪುಲಿಕೇಶಿನಗರ ಸಂಚಾರ ಪೊಲೀಸ್‌ ಠಾಣೆ, ಡೇವಿಸ್‌ ರೋಡ್‌, ಎಚ್‌.ಎಂ.ರೋಡ್‌ ಜಂಕ್ಷನ್‌, ಲಿಂಗರಾಜಪುರ ಫ್ಲೆತ್ರೖಓವರ್‌, ಅಯೋಧ್ಯ ಜಂಕ್ಷನ್‌, ಸಿದ್ದಪ್ಪ ರೆಡ್ಡಿ ಜಂಕ್ಷನ್‌, ಹೆಣ್ಣೂರು ಜಂಕ್ಷನ್‌ಎಡ ತಿರುವು, ಹೊರ ವರ್ತುಲ ರಸ್ತೆ, ನಾಗವಾರ ಜಂಕ್ಷನ್‌ ಬಲ ತಿರುವು, ಥಣಿಸಂದ್ರ ಕಡೆಗೆ ತೆರಳಬಹುದು.

>> ನೇತಾಜಿ ಜಂಕ್ಷನ್‌ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ : ನೇತಾಜಿ ಜಂಕ್ಷನ್‌ನಲ್ಲಿಬಲ ತಿರುವು ಪಡೆದು ಎಂ.ಎಂ.ರಸ್ತೆ, ಮಾಸ್ಕ್‌ ಜಂಕ್ಷನ್‌ನಲ್ಲಿಎಡ ತಿರುವು, ಕ್ಲಾರೆನ್ಸ್‌ ಬ್ರಿಡ್ಜ್‌ ಬಲ ತಿರುವು, ಪಾಟರಿ ರಸ್ತೆ, ಎಚ್‌.ಎಂ.ರಸ್ತೆ ಮೂಲಕ ಲಿಂಗರಾಜಪುರ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.

> ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್‌ ಕಡೆಗೆ: ಲಾಜರ್‌ ರಸ್ತೆಯಲ್ಲಿ ಸಂಚರಿಸಿ ರೈಲ್ವೆ ಕೆಳ ಸೇತುವೆ ಮುಖಾಂತರ ಎಂ.ಎಂ.ರಸ್ತೆ ತಲುಪಿ ಪುಲಿಕೇಶಿನಗರ ಕಡೆಗೆ ಹೋಗಬಹುದು.

>> ರೋಜರ್ಸ್ ರಸ್ತೆ, ಆಮ್‌ರ್‍ಸ್ಟ್ರಾಂಗ್‌ ರಸ್ತೆ ಹಾಗೂ ಹಾಲ್‌ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ- ವಿವಿಯಾನಿ ರಸ್ತೆ ಮುಖಾಂತರ ಪಾಟರಿ ರಸ್ತೆ ತಲುಪಿ ಲಾಜರ್‌ ರಸ್ತೆ ರೈಲ್ವೆ ಅಂಡರ್‌ ಬ್ರಿಡ್ಜ್‌ ಮೂಲಕ ಎಂ.ಎಂ.ರಸೆ ್ತತಲುಪಿ ಪುಲಿಕೇಶಿನಗರ ಕಡೆಗೆ ಹೋಗಬಹುದು.

>> ಮಾಸ್ಕ್‌ ಜಂಕ್ಷನ್‌ನಿಂದ ಕ್ಲಾರೆನ್ಸ್‌ ಬ್ರಿಡ್ಜ್‌ ಮೂಲಕ ಪಾಟರಿ ರಸ್ತೆ ಕಡೆಗೆ: ಮಾಸ್ಕ್‌ ಜಂಕ್ಷನ್‌ನಿಂದ ಎಂ.ಎಂ.ರಸ್ತೆ, ಲಾಜರ್‌ ರಸ್ತೆ, ರೈಲ್ವೆ ಕೆಳಸೇತುವೆ, ಪಾಟರಿ ರಸ್ತೆ, ಎಚ್‌.ಎಂ.ರಸ್ತೆ ಮೂಲಕ ಲಿಂಗರಾಜಪುರ ಹಾಗೂ ಹೆಣ್ಣೂರು ಕಡೆಗೆ ಹೋಗಬಹುದು.

>> ಲಾಜರ್‌ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ ಸಿಂಧಿ ಕಾಲೊನಿ ಜಂಕ್ಷನ್‌ ಕಡೆಗೆ: ಎಂ.ಎಂ.ರಸ್ತೆ ಮೂಲಕ ಮಾಸ್ಕ್‌ ಜಂಕ್ಷನ್‌ ಎಡ ತಿರುವು, ಕೋಲ್ಸ್‌ ರಸ್ತೆ, ವೀಲ್ಹರ್ಸ್ ರಸ್ತೆ, ಸಿಂಧಿ ಕಾಲೊನಿ ಜಂಕ್ಷನ್‌.

> ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್‌ ಮೆಮೋರಿಯಲ್‌ ಜಂಕ್ಷನ್‌ ಕಡೆಗೆ: ವೀಲ್ಹರ್ಸ್ ರಸ್ತೆ, ಥಾಮಸ್‌ ಕೆಫೆ ಜಂಕ್ಷನ್‌ ಎಡ ತಿರುವು, ಸೇಂಟ್‌ ಜಾನ್ಸ್‌ ಚರ್ಚ್ ರಸ್ತೆ, ವಾರ್‌ ಮೆಮೋರಿಯಲ್‌ ಜಂಕ್ಷನ್‌.

ಪಾರ್ಕಿಂಗ್‌ ನಿರ್ಬಂಧ
ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್‌, ಗೋವಿಂದಪುರ ಜಂಕ್ಷನ್‌, ಗೋವಿಂದಪುರ ಪೊಲೀಸ್‌ ಠಾಣೆವರೆಗೆ, ಎಚ್‌ಬಿಆರ್‌ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್‌ ಜಂಕ್ಷನ್‌ವರೆಗೆ, ಎಂ.ಎಂ.ರಸ್ತೆ, ಪಾಟರಿ ರಸ್ತೆ, ಲಾಜರ್‌ ರಸ್ತೆ, ಬುದ್ಧ ವಿಹಾರ ರಸ್ತೆ, ಅಸ್ಸಾಯೇ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ.

Vishwa News 24

Recent Posts

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

22 hours ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ; ಆರೋಪಿಗಾಗಿ ಶೋಧ- vishwanews24

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…

22 hours ago

ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ -vishwanews24

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…

23 hours ago

BREAKING NEWS : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – vishwanews24

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…

24 hours ago

ಕಾಮನ್‌ವೆಲ್ತ್ ಗೇಮ್ಸ್ 2026 : ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಝಂದು ಕುಮಾರ್ – vishwanews24

ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್‌: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…

1 day ago

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…

1 day ago