ಇರಾಕ್ ನಲ್ಲಿ ಭಗವಾನ್ ಶ್ರೀರಾಮನನ್ನು ಹೋಲುವ ಕುರುಹು ಪತ್ತೆ -Vishwanews24
ಇರಾನ್, : ಮಧ್ಯಪ್ರಾಚ್ಯದ ಇರಾಕ್ ನಲ್ಲಿ ಭಗವಾನ್ ಶ್ರೀರಾಮನನ್ನು ಹೋಲುವ ಉಬ್ಬು ಚಿತ್ರವೊಂದು ಪತ್ತೆಯಾಗಿದೆ.
ಇರಾನ್ ನ ಹೊರೇನ್ ಶೇಖಾನ್ ಎನ್ನುವ ಪ್ರದೇಶದಲ್ಲಿ ಇರುವ ದರ್ಬಾಂದ್ ಐ ಬೇಲುಲಾ ಬಂಡೆಯಲ್ಲಿ ಈ ಉಬ್ಬುಚಿತ್ರ ಕಂಡು ಬಂದಿದೆ. ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆ ಮತ್ತು ಅಯೋಧ್ಯೆಯ ಶೋಧ ಸಂಸ್ಥಾನದ ವಿನಂತಿಸಿ ಆ ಬಳಿಕ ಇರಾಕ್ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗ ಉಬ್ಬುಚಿತ್ರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಈ ಉಬ್ಬುಚಿತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ರಾಮನನ್ನೇ ಹೋಲಿಕೆ ಮಾಡುವ ಕೆತ್ತನೆ ಕಂಡು ಬಂದಿರುವುದಾಗಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಪ್ರದೀಪ್ ಸಿಂಗ್, ಕ್ರಿಸ್ತಪೂರ್ವ 4,500 ಹಾಗೂ 1,900 ನಡುವಿನ ಸಮಯದಲ್ಲಿ ಮೆಸಪೊಟೆಮಿಯಾವನ್ನು ಸುಮೇರಿಯನ್ನರು ಆಳ್ವಿಕೆ ನಡೆಸುತ್ತಿದ್ದರು. ಬಹುಶಃ ಅವರು ಭಾರತದಿಂದ ಅಲ್ಲಿಗೆ ಹೋಗಿರಬಹುದು ಎಂದು ಕೆಲ ದಾಖಲೆಗಳು ಹೇಳುತ್ತಿವೆ. ಜೊತೆಗೆ ಅವರ ವಂಶವಾಹಿಗಳು ಸಿಂಧೂ ಕಣಿವೆ ನಾಗರಿಕತೆಯ ಕುರುಹುಗಳು ಜೊತೆಗೆ ಹೋಲಿಕೆಯಾಗುತ್ತವೆ.
ಹೀಗಾಗಿ ಭಾರತದ ಸಂಸ್ಕೃತಿ ಇಲ್ಲಿಯವರೆಗೆ ಹಬ್ಬಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಪತ್ತೆಯಾಗಿರುವ ಆಕೃತಿಗಳು ಶ್ರೀರಾಮಚಂದ್ರ ಹಾಗೂ ಆಂಜನೇಯನಿಗೆ ಹೋಲಿಕೆಯಾಗುತ್ತಿವೆ.ಚಿತ್ರದಲ್ಲಿ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ನಿಂತಿದ್ದು, ಸೊಂಟದಲ್ಲಿ ಕತ್ತಿಯೂ ಇದೆ. ರಾಜನ ಎದುರಿಗೆ ಕೈ ಮುಗಿದು ಕುಳಿತಿರುವ ಸೇವಕನ ಚಿತ್ರವಿದ್ದು, ಇದು ಶ್ರೀರಾಮ ಹಾಗೂ ಹನುಮಂತನಾಗಿರಬಹುದು ಎಂದು ಶೋಧ ಸಂಸ್ಥಾನದ ಅಧಿಕಾರಿಗಳು ಊಹಿಸಿದ್ದಾರೆ.
