ಇರಾನ್‌-ಇಸ್ರೇಲ್‌ ಯುದ್ಧ : ಬೆಂಗಳೂರಿಗೆ ಆಗಮಿಸಬೇಕಿದ್ದ 9, ನಿರ್ಗಮಿಸಬೇಕಿದ್ದ 10 ವಿಮಾನಗಳು ರದ್ದು – vishwanews24

Featured, ರಾಜ್ಯ ನ್ಯೂಸ್

ಇರಾನ್‌-ಇಸ್ರೇಲ್‌ ಯುದ್ಧ : ಬೆಂಗಳೂರಿಗೆ ಆಗಮಿಸಬೇಕಿದ್ದ 9, ನಿರ್ಗಮಿಸಬೇಕಿದ್ದ 10 ವಿಮಾನಗಳು ರದ್ದು

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ  ಮತ್ತೆ ತೀವ್ರಗೊಂಡಿದ್ದು, ಮಧ್ಯಪ್ರಾಚ್ಯದ ಏರ್‌ಸ್ಪೇಸ್‌ಗೆ ನಿರ್ಬಂಧ ವಿಧಿಸಲಾಗಿದೆ. ಪರಿಣಾಮವಾಗಿ ಬೆಂಗಳೂರಿಗೆ ಆಗಮಿಸಬೇಕಿದ್ದ 9 ಮತ್ತು ನಿರ್ಗಮಿಸಬೇಕಿದ್ದ 10 ವಿಮಾನಗಳ ಹಾರಾಟ ರದ್ದಾಗಿದೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲ ವಿಮಾನಗಳು ರದ್ದಾಗಿವೆ. ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ, ದೋಹಾ ಮಾರ್ಗಗಳ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ:

ಕಾಪು : ಎಂಡಿಎಂಎ ಮಾದಕ ವಸ್ತು ಸಾಗಾಟ ; ಇಬ್ಬರ ಬಂಧನ – vishwanews24

ಏರ್‌ಸ್ಪೇಸ್ ನಿರ್ಬಂಧ ಮತ್ತು ಭದ್ರತಾ ಕಾರಣದಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನ ವೇಳಾಪಟ್ಟಿಯನ್ನು ಪರಿಶೀಲಿಸಲು ವಿಮಾನ ನಿಲ್ದಾಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯಕ್ಕೆ ಹೋಗುವ ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ.

Leave a Reply