ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ. ಆನ್‌ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‌ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (ಎಐಓಸಿಡಿ) ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಕರ್ನಾಟಕದಲ್ಲೂ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ಬಂದ್‌ಗೆ ಬೆಂಬಲ ನೀಡಿದ್ದು, ರಾಜ್ಯಾದ್ಯಂತ 26,000ಕ್ಕೂ ಅಧಿಕ ಮೆಡಿಕಲ್‌ಗಳು ಇಂದು ಬಂದ್ ಆಗಲಿವೆ. ಒಂದು ದಿನದ ಮಟ್ಟಿಗೆ ಸಂಪೂರ್ಣ ಮೆಡಿಕಲ್‌ಗಳು ಬಂದ್ ಆಗಲಿವೆ. ಬೆಂಗಳೂರು ಫಾರ್ಮ್ ರಿಟೈಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಫೋರಂನ ಸಂಘದಿಂದ ಹೊರಬಂದ ಕೆಲವರು ಪ್ರತ್ಯೇಕ ಸಂಘ ರಚಿಸಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಮೆಡಿಕಲ್ ಮಾಲೀಕರೇ ಬಂದ್‌ಗೆ ಬೆಂಬಲಿಸಿ ಮೆಡಿಕಲ್‌ಗಳನ್ನು ಮುಚ್ಚಿದ್ದಾರೆ.
ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಒಳಗೆ ಇರುವ ಫಾರ್ಮಸಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಗಂಭೀರ ಪರಿಸ್ಥಿತಿಗಳಲ್ಲಿ ಅಗತ್ಯ ಔಷಧಿಗಳನ್ನು ಒದಗಿಸಲು ಆಯ್ದ ಪ್ರಮುಖ ಕೇಂದ್ರಗಳಲ್ಲಿ ತುರ್ತು ಕೌಂಟರ್‌ಗಳು ತೆರೆದಿರುತ್ತವೆ. ತುರ್ತು ಸಂದರ್ಭ ಬಂದ್ರೆ ಆಸ್ಪತ್ರೆಯ ಫಾರ್ಮಸಿಗಳು ಓಪನ್ ಇರಲಿದೆ.
ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುತ್ತೇವೆ : ಮಮತಾ ಬ್ಯಾನರ್ಜಿ ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಭವಿಷ್ಯದಲ್ಲಿ ಅಧಿಕಾರದಿಂದ…
ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಬೆಳ್ತಂಗಡಿ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ಏಳು ಜನರ ತಂಡವೊಂದು ಈಜಲು…
ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ' ವಜ್ರಾಭರಣ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ…
ಮಡಿಕೇರಿ : ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ಕಾಳಗ; ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ಮಹಿಳೆ ಮೃತ್ಯು ಮಡಿಕೇರಿ :…
ದೇಶ ಆರ್ಥಿಕ ಸಂಕಷ್ಟದಲ್ಲಿದೆ ಅಂತ ರಾಹುಲ್ ಗಾಂಧಿ ಮೊದಲೇ ಹೇಳಿದ್ದರು: ಪ್ರಿಯಾಂಕ್ ಖರ್ಗೆ ಕಲಬುರಗಿ: ದೇಶದ ಆರ್ಥಿಕ ಸಂಕಷ್ಟದಲ್ಲಿದೆ ಅಂತ…
ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು ; ಪ್ರಯಾಣಿಕರು ಅಪಾಯದಿಂದ ಪಾರು ಕಾರ್ಕಳ: ಧರ್ಮಸ್ಥಳದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ…