ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು : ಬಿಜೆಪಿ ಶಾಸಕ ವಿಕ್ರಮ್ ಸೈನಿ -Vishwanews24
ಮುಜಾಫರ್ನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿದ್ದರಿಂದ ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು ಎಂದು ಬಿಜೆಪಿ ಶಾಸಕ ವಿಕ್ರಮ್ ಸೈನಿ, ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕರಾಗಿದ್ದಾರೆ ವಿಕ್ರಮ್ ಸೈನಿ. ಸಂವಿಧಾನದ 370ನೇ ವಿಧಿ ರದ್ದು ಪಡಿಸಿರುವ ನಿರ್ಧಾರವನ್ನು ಸ್ವಾಗತಿ ಮುಜಾಫರ್ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೈನಿ, ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದಾಗಿ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಅಲ್ಲಿ ಜಮೀನು ಖರೀದಿಸಬಹುದು. ಅಲ್ಲಿಯವರನ್ನು ಮದುವೆಯಾಗಬಹುದು ಎಂದಿದ್ದಾರೆ.
Muzaffarnagar BJP MLA Vikram Saini on abrogation of Article 370.
"Muslim karyakartas sitting here should be celebrating. Marry "gori ladki" from Kashmir now" pic.twitter.com/tRhZXy8IZq
— Piyush Rai (@Benarasiyaa) August 6, 2019
ನಮ್ಮ ಕಾರ್ಯಕರ್ತರು ತುಂಬಾ ಉತ್ಸುಕರಾಗಿದ್ದಾರೆ. ಮದುವೆಯಾಗದ ಯುವಕರು ಅಲ್ಲಿಗೆ ಹೋಗಿ ಮದುವೆಯಾಗಬಹುದು. ಅಲ್ಲಿ ಈಗ ಯಾವುದೇ ಸಮಸ್ಯೆಗಳಿಲ್ಲ. ಈ ಹಿಂದೆ ಅಲ್ಲಿ ಮಹಿಳೆಯರ ಮೇಲೆ ತುಂಬಾ ದಬ್ಬಾಳಿಕೆ ನಡೆಯುತ್ತಿತ್ತು. ಕಾಶ್ಮೀರದ ಮಹಿಳೆಯೊಬ್ಬರು ಉತ್ತರ ಪ್ರದೇಶದ ಯುವಕನನ್ನು ಮದುವೆಯಾದರೆ ಆಕೆಯ ಪೌರತ್ವ ರದ್ದು ಆಗುತ್ತಿತ್ತು. ಭಾರತ ಮತ್ತು ಕಾಶ್ಮೀರದಲ್ಲಿ ಬೇರೆ ಬೇರೆ ಪೌರತ್ವ ಇದೆ ಎಂದು ಸೈನಿ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮುಸ್ಲಿಂ ಕಾರ್ಯಕರ್ತರು ಸಂಭ್ರಮಿಸಬೇಕು. ಬೆಳ್ಳಗಿರುವ ಕಾಶ್ಮೀರದ ಯುವತಿಯರನ್ನು ಅವರು ಮದುವೆಯಾಗಬಹುದು. ಅಲ್ಲಿಯೂ ಸಂಭ್ರಮಾಚರಣೆ ಮಾಡಬೇಕು. ಹಿಂದೂ ಆಗಲೀ, ಮುಸ್ಲಿಂ ಆಗಲೀ ಎಲ್ಲರೂ ಸಂಭ್ರಮಿಸಬೇಕು. ಇಡೀ ದೇಶವೇ ಸಂಭ್ರಮಿಸಬೇಕಾದ ವಿಷಯ ಇದು ಎಂದು ಸೈನಿ ಹೇಳಿದ್ದಾರೆ.
