ಮೇಷ ರಾಶಿ
ಇಂದು ನೀವು ಚಂಚಲ ಚಿತ್ತದಿಂದ ಮಾಡುವ ಕೆಲಸಗಳು ಹಾದಿ ತಪ್ಪುವುವು. ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಮನ್ನಡೆಯುವುದು ಉತ್ತಮ.
ಅದೃಷ್ಟ ಸಂಖ್ಯೆ: 8
ವೃಷಭ ರಾಶಿ
ಇಂದು ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿಬರಲಿದೆ. ಈ ದಿನ ನಿಮ್ಮನ್ನು ಹುಡುಕಿಕೊಂಡು ಬಂದ ಅವಕಾಶವನ್ನು ನಿರ್ಲಕ್ಷಿಸಿದೇ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ.
ಅದೃಷ್ಟ ಸಂಖ್ಯೆ: 3
ಮಿಥುನ ರಾಶಿ
ಯಾವುದೇ ಉದ್ಯೋಗದಲ್ಲಿರುವವರು ಅಥವಾ ಇನ್ನಿತರ ವೃತ್ತಿರಂಗದಲ್ಲಿರುವವರು ತಮ್ಮ ಮೇಲಾಧಿಕಾರಿಗಳೊಂದಿಗೆ ಜಗಳವಾಡುವ ಸಂದರ್ಭಗಳು ಹೆಚ್ಚಿವೆ. ಆದಷ್ಟು ಜಗಳವಾಗದಂತೆ ನೋಡಿಕೊಳ್ಳಿ.
ಅದೃಷ್ಟ ಸಂಖ್ಯೆ: 6
ಕಟಕ ರಾಶಿ
ಕಟಕ ಅಥವಾ ಕರ್ಕಾಟಕ ರಾಶಿಯವರು ಇಂದು ಕೆಲವೊಂದು ಮಂಗಳ ಕಾರ್ಯದಲ್ಲಿ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನೀವು ಬಹುದಿನಗಳಿಂದ ಕಾಯುತ್ತಿದ್ದ ಗ್ರಹ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ.
ಅದೃಷ್ಟ ಸಂಖ್ಯೆ: 5
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಿದ್ಯಾರ್ಥಿಗಳಾಗಿದ್ದರೆ ನಿಮಗಿಂದು ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆ. ಈ ಶುಭ ಅವಕಾಶವನ್ನು ಅಲ್ಲಗಳೆಯದೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಅದೃಷ್ಟ ಸಂಖ್ಯೆ: 2
ಕನ್ಯಾ ರಾಶಿ
ಸೋಮವಾರದ ಈ ದಿನ ನೀವು ಗುರುಹಿರಿಯರ ಮಾತಿಗೆ ಗೌರವವನ್ನು ನೀಡಬೇಕು. ಅವರ ಮಾತನ್ನು ಎಂದಿಗೂ ಅಲ್ಲಗಳೆಯದಿರಿ. ನೀವಿಂದು ಹಿರಿಯರ ಮಾತನ್ನು ನಿರಾಕರಿಸಿದರೆ ಮನೆಯಲ್ಲಿ ಹಿರಿಯರೊಂದಿಗೆ ಜಗಳವುಂಟಾಗಬಹುದು.
ಅದೃಷ್ಟ ಸಂಖ್ಯೆ: 4
ತುಲಾ ರಾಶಿ
ಜೀವನದಲ್ಲಿ ಮುನ್ನಡೆ ಸಾಧಿಸುವ ಮಾರ್ಗದಲ್ಲಿ ನಿಮ್ಮ ಚಟುವಟಿಕೆ ಹೆಚ್ಚಾಗಲಿದೆ. ಮನಸ್ಸಿಗೆ ಅನುಗುಣವಾಗಿ ವಿಚಾರಗಳಿಗೆ ಒಪ್ಪಿಗೆ ಸೂಚಿಸಿ. ಮನಸ್ಸಿಗೆ ಒಪ್ಪಿಗೆಯಿಲ್ಲದ, ಮನಸ್ಸಿಗೆ ಸರಿಯೆನಿಸದ ಕೆಲಸಗಳನ್ನು ಮಾಡದಿರಿ. ಉಪಕಸುಬುಗಳಿಂದ ಆದಾಯವನ್ನು ಅಥವಾ ಆರ್ಥಿಕ ಲಾಭವನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ: 9
ವೃಶ್ಚಿಕ ರಾಶಿ
ನಿಮ್ಮ ಲವಲವಿಕೆಯೇ ನಿಮಗೆ ಯಶಸ್ಸನ್ನು ಸಾಧಿಸಲು ಸಹಕಾರಿ. ವಾಣಿಜ್ಯ ಕ್ಷೇತ್ರದಲ್ಲಿ ತೃಪ್ತಿದಾಯಕ ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ. ಆರಾಮದಾಯಕ ಅಲೆದಾಟದಿಂದ ಕಾರ್ಯಸಿದ್ಧಿ ಯೋಗವಿದೆ.
ಅದೃಷ್ಟ ಸಂಖ್ಯೆ: 1
ಧನುಸ್ಸು ರಾಶಿ
ಸರಳವಾಗಿ ಅಚ್ಚುಕಟ್ಟಿನಿಂದ ಆಯೋಜಿಸಲ್ಪಟ್ಟ ಅಥವಾ ಯಾವುದಕ್ಕೂ ಕೊರತೆಯಿಲ್ಲದ ಶುಭ ಸಮಾರಂಭಗಳಲ್ಲಿ ನೀವು ಪಾಲ್ಗೊಳ್ಳುವಿರಿ. ವೃತ್ತಿರಂಗದಲ್ಲಿ ಸ್ನೇಹಿತರ ಸಹಾಯದಿಂದ ಲಾಭದಾಯಕ ಬೆಳವಣಿಗೆಯನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ: 7
ಮಕರ ರಾಶಿ
ವ್ಯವಹಾರದಲ್ಲಿನ ಅಳುಕು ಮನೋಭಾವ ದೂರಾಗಿ ಉತ್ತೇಜನ ಪ್ರಾಪ್ತವಾಗಲಿದೆ. ಅಸೆ ಆಕಾಂಕ್ಷೆಗಳ ಈಡೇರಿಕೆಗೆ ಮತ್ಸದ್ಧಿಗಳ ಸಾಂಗತ್ಯದಿಂದ ಸಂತೋಷ ಸಿಗಲಿದೆ.
ಅದೃಷ್ಟ ಸಂಖ್ಯೆ: 3
ಕುಂಭ ರಾಶಿ
ಈ ದಿನ ನೀವು ಅತ್ಯಂತ ಉತ್ಸುಕ ಮನೋಭಾವವನ್ನು ಹೊಂದಿರುವಿರಿ. ಘನತೆಗೆ ಧಕ್ಕೆಯಾಗದಂತೆ ಮೇಧಾವಿಗಳೊಂದಿಗೆ ಅಥವಾ ಜ್ಞಾನಿಗಳೊಂದಿಗೆ ಚರ್ಚೆಯಲ್ಲಿ ಮುಳುಗುವಿರಿ.
ಅದೃಷ್ಟ ಸಂಖ್ಯೆ: 6
ಮೀನ ರಾಶಿ
ಯಾವುದೇ ಒಂದು ವಿಷಯ ನಿಮಗೆ ಅಗತ್ಯವೆನಿಸಿದರೆ ಮಾತ್ರ ಆ ಅಗತ್ಯತೆಗೆ ತಕ್ಕಂತೆ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ.
ಅದೃಷ್ಟ ಸಂಖ್ಯೆ: 8
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…