ಈ ಬಾರಿ ಸರಳ ಲಕ್ಷ ದೀಪೋತ್ಸವ ಆಚರಣೆ : ಡಾ. ಡಿ.ವೀರೇಂದ್ರ ಹೆಗ್ಗಡೆ -Vishwanews24

Featured, ದಕ್ಷಿಣ ಕನ್ನಡ

ಈ ಬಾರಿ ಸರಳ ಲಕ್ಷ ದೀಪೋತ್ಸವ ಆಚರಣೆ : ಡಾ. ಡಿ.ವೀರೇಂದ್ರ ಹೆಗ್ಗಡೆ -Vishwanews24

ಧರ್ಮಸ್ಥಳ: ಕೊರೊನಾ ಕರಿನೆರಳಿನಿಂದಾಗಿ ಈ ಬಾರಿ ಲಕ್ಷ ದೀಪೋತ್ಸವವನ್ನು ಸರಳ ವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.ಅಲ್ಲದೇ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳನ್ನು ಅವಿರತವಾಗಿ ನಡೆಸಬೇಕು ಎಂಬ ದೃಷ್ಟಿಯಲ್ಲಿ ಅವುಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಈ ಬಾರಿ ಲಕ್ಷ ದೀಪೋತ್ಸವವನ್ನು ಆದಷ್ಟು ಅನ್​ಲೈನ್ ಮುಖಾಂತರ ವಿವಿಧ ಚಾನಲ್ ಗಳ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಯಕ್ಷಗಾನವನ್ನು ಅನ್​ಲೈನ್ ಹಾಗೂ ಇನ್ನಿತರ ಚಾನಲ್ ಗಳ ಮೂಲಕ ಪ್ರತಿದಿನ ಸುಮಾರು 20 ಸಾವಿರಕ್ಕಿಂತಲೂ ಅಧಿಕ ಮಂದಿ ನೋಡುತ್ತಿದ್ದಾರೆ. ಆದ್ದರಿಂದ ಈ ಕೊರೊನಾ ಸಂದರ್ಭದಲ್ಲಿ ಇಂತಹ ವ್ಯವಸ್ಥೆ ಒಳ್ಳೆಯದು ಎಂದಿದ್ದಾರೆ.