ಉಕ್ರೇನ್ : 629 ಭಾರತೀಯರನ್ನು ಸ್ವದೇಶಕ್ಕೆ ಕರೆತಂದ ವಾಯುಪಡೆಯ 3 ಐಎಎಫ್ ವಿಮಾನಗಳು – Vishwanews24

Featured, ರಾಷ್ಟ್ರ ನ್ಯೂಸ್

ಉಕ್ರೇನ್ : 629 ಭಾರತೀಯರನ್ನು ಸ್ವದೇಶಕ್ಕೆ ಕರೆತಂದ ವಾಯುಪಡೆಯ 3 ಐಎಎಫ್ ವಿಮಾನಗಳು – Vishwanews24

ನವದೆಹಲಿ : ಉಕ್ರೇನ್‌ನ ಲ್ಲಿ ಸಿಲುಕಿದ್ದ 629 ಭಾರತೀಯರನ್ನು ಮೂರು ಐಎಎಫ್ ವಿಮಾನಗಳ ಮೂಲಕ ಶನಿವಾರ ಬೆಳಿಗ್ಗೆ ಸ್ವದೇಶಕ್ಕೆ ಕರೆತಲಾಗಿದೆ ಎಂದು ವಾಯುಪಡೆಯು ತಿಳಿಸಿದೆ.

ಉಕ್ರೇನ್‌ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಸ್ಲೋವಾಕಿಯಾ ಹಾಗೂ ಪೊಲೆಂಡ್‌ನಿಂದ ಹಾರಾಟ ಆರಂಭಿಸಿದ ಈ ವಿಮಾನಗಳು ದೆಹಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದಿವೆ.

‘ಆಪರೇಷನ್ ಗಂಗಾ’ ಭಾಗವಾಗಿ ಇಲ್ಲಿಯವರೆಗೆ, 10 ವಿಮಾನಗಳ ಮೂಲಕ ಭಾರತೀಯ ವಾಯುಪಡೆಯು (IAF) 2,056 ಪ್ರಯಾಣಿಕರನ್ನು ಮರಳಿ ಕರೆತಂದಿದ್ದು, 26 ಟನ್ ಪರಿಹಾರ ಸಾಮಾಗ್ರಿಗಳನ್ನು ಹೊತ್ತೊಯ್ದಿದೆ IAF ಹೇಳಿಕೆ ತಿಳಿಸಿದೆ.

ಹಿಂಡನ್ ವಾಯುನೆಲೆಯಿಂದ ಶುಕ್ರವಾರ ಟೇಕಾಫ್ ಆಗಿದ್ದ ಐಎಎಫ್‌ನ ಮೂರು ಸಿ-17 ಹೆವಿ ಲಿಫ್ಟ್ ಸಾರಿಗೆ ವಿಮಾನಗಳು ಶನಿವಾರ ಬೆಳಿಗ್ಗೆ ಮರಳಿದ್ದು, 16.5 ಟನ್‌ಗಳಷ್ಟು ಪರಿಹಾರದ ಹೊರೆಯನ್ನು ಸಹ ಸಾಗಿಸಿದ್ದವು ವಾಯುಪಡೆಯು ತಿಳಿಸಿದೆ.

ಸಿಎಂ ಬೊಮ್ಮಾಯಿ ಬಜೆಟ್‍ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ : ವಿನಯ್ ಕುಮಾರ್ ಸೊರಕೆ – Vishwanews24

Leave a Reply