ಬೆಂಗಳೂರು : ಪುಲ್ವಾಮ ಉಗ್ರರ ದಾಳಿ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಫೆ. 19 ರಂದು ಕರ್ನಾಟಕ ಬಂದ್ ಮಾಡುವುದಾಗಿ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಯೋಧರ ಸಾವಿನಿಂದ ಭಾರತವೇ ಕಣ್ಣೀರುಡುತ್ತಿದೆ. ಭಾರತ ಸರ್ಕಾರಕ್ಕೆ ಇದೊಂದು ಚಾಲೆಂಜ್ ಆಗಿದೆ. ನಾವು ಮನಸು ಮಾಡಿದರೆ ಉಗ್ರ ಸಂಘಟನೆಯನ್ನು ಪುಡಿ ಮಾಡುವ ಶಕ್ತಿ ಇದೆ. 49 ಯೋಧರ ಪ್ರಾಣ ಕಳೆದುಕೊಂಡಿದ್ದಾರೆ. ಇಂಟೆಲಿಜೆನ್ಸ್ ಏನಾಗಿದೆ. ವಾಹನ ಬಂದು ಡಿಕ್ಕಿ ಹೊಡೆದರೂ ಯಾಕೆ ನೋಡ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆರು ಕೋಟಿ ಕನ್ನಡಿಗರು ಉಗ್ರರ ವಿರುದ್ದ ಪ್ರತೀಕಾರಕ್ಕಾಗಿ ಕಾಯುತ್ತಾ ಇದ್ದಾರೆ. ಪಕ್ಷ ಭೇದ ಮರೆತು ಎಲ್ಲಾ ಪಕ್ಷಗಳು ಒಂದಾಗಿವೆ. ಈ ಕೃತ್ಯ ಖಂಡಿಸಿ ಭಯೋತ್ಪಾದನೆ ಇರಬಾರದು ಎಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದರು.
ಅಂದು ಬೆಳಗ್ಗೆ 6ರಿಂದ ಸಂಜೆಯವರೆಗೂ ಬಂದ್ ನಡೆಯಲಿದೆ. ಆಸ್ಪತ್ರೆ, ಮಾಧ್ಯಮಗಳು, ಔಷಧಿ, ಹಾಲು ಮಾರಾಟಕ್ಕೆ ವಿನಾಯಿತಿ ಇರುತ್ತದೆ. ಬಸ್‌ಗಳು, ಸಿನಿಮಾ, ಖಾಸಗಿ ವಾಹನಗಳು ಬಂದ್ ಆಗಲಿವೆ. ಹೋಟೆಲ್, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲಾ ಕಾಲೇಜ್ ಬಂದ್ ಆಗಲಿವೆ ಎಂದು ಹೇಳಿದರು.
ಬಿಡಿಎ, ಬಿಬಿಎಂಪಿ ಎಲ್ಲಾ ಕಾರ್ಖಾನೆಗಳು, ಐಟಿ-ಬಿಟಿ ಬಂದ್ ಆಗಬೇಕು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಅಂದು ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ವಾಟಾಳ್ ಮನವಿ ಮಾಡಿದರು.
ಕೈಗಾರಿಕಾ ಸಂಘಟನೆಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘ, ಸರ್ಕಾರಿ ನೌಕರರ ಸಂಘ, ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ…
ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು ಉಡುಪಿ: ಮುಂಬರುವ ಗುಡ್‌ಫ್ರೈಡೇ ಹಾಗೂ ಈಸ್ಟರ್ ಪ್ರಯುಕ್ತ ಜನರ ವಿಶೇಷ ಒತ್ತಡವನ್ನು…
ಉಡುಪಿ: ಏ.1ರಂದು ಪಿಂಕ್ ಸೂಪರ್ ಮೂನ್ ವೀಕ್ಷಣೆಗೆ ಅವಕಾಶ ಉಡುಪಿ: ಆಕಾಶಕಾಯದಲ್ಲಿ ದಿನವೂ ಬೆಳ್ಳಗೆ ಗೋಚರಿಸುವ ಚಂದ್ರ ಏ.1ರಂದು ಸಂಜೆ…
ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ತಹಸೀಲ್ದಾರ್ ಕರೆ ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ…
ಮಂಗಳೂರು : 2025ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಮಂಗಳೂರು : ಕರ್ನಾಟಕ…
ಮಂಗಳೂರು: ಕಟ್ಟಡದ 12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಂಗಳೂರು: ನಗರದ ಅತ್ತಾವರದಲ್ಲಿರುವ ಕಾಸ ಗ್ರ್ಯಾಂಡ್ ಕಟ್ಟಡದಲ್ಲಿ 12ನೇ ಮಹಡಿಯಿಂದ…