ಉಗ್ರರ ವಿಚಾರದಲ್ಲಿ ಯಾವುದೇ ರಾಜಿ ಮಾತಿಲ್ಲ,ಅವರನ್ನು ಸಹಿಸಿಕೊಳ್ಳುವ ಅಗತ್ಯವೂ ಇಲ್ಲ : ಅಮಿತ್ ಶಾ -Vishwanews24
ನವದೆಹಲಿ : ಉಗ್ರರ ವಿಚಾರದಲ್ಲಿ ಯಾವುದೇ ರಾಜಿ ಮಾತಿಲ್ಲ. ಅವರನ್ನು ಸಹಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖಡಕ್ ಸಂದೇಶ ರವಾನಿಸಿದ್ದಾರೆ.
ಸೋಮವಾರ ನಡೆದ ಸಭೆಯಲ್ಲಿ ಅಮಿತ್ ಶಾ, ಜಮ್ಮುಕಾಶ್ಮೀರದ ವಾಸ್ತವದ ಪರಿಸ್ಥಿತಿ ಕುರಿತು ವರದಿಯನ್ನು ಕೇಳಿದ್ದಾರೆ ಎನ್ನಲಾಗಿದ್ದು, ಇನ್ನೆರಡು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತ ಪರಿಸ್ಥಿತಿ ನೆಲಸುವಂತೆ ಸೂಕ್ತ ರಣತಂತ್ರ ರೂಪಿಸಲು ನಿರ್ಧರಿಸುವುದಾಗಿ ಷಾ ತಿಳಿಸಿದ್ದಾರೆ.
2019 ರ ಮೇ ತಿಂಗಳವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 101 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಅಂದರೆ ಪ್ರತಿ ತಿಂಗಳು 20 ಉಗ್ರರು ನಮ್ಮ ಭದ್ರತಾ ಪಡೆಯ ದಾಳಿಗೆ ಬಲಿಯಾಗುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲೇ ಇರುವ ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲಾಗುತ್ತಿಲ್ಲ.
ಸುಮಾರು 50 ಯುವಕರು ವಿವಿಧ ಉಗ್ರ ಸಂಘಟನೆಗಳನ್ನು ಸೇರಿಕೊಂಡಿದ್ದಾರೆ. ಇದು ಚಿಂತೆಗೆ ಕಾರಣವಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
