ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಜರುಗುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ-2026ರ ಸಲುವಾಗಿ ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳನ್ನು ಒಳಗೊಂಡ ಕುಸ್ತಿಪಟುಗಳಲ್ಲಿ ಅ.13ರಂದು ಶ್ರೀ ಮಹಾಲಕ್ಷ್ಮೀ ದೇವಳದ ಮುಂಭಾಗದ ವೇದಿಕೆ ಯಲ್ಲಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.
ಪುರುಷರ ವಿಭಾಗದಲ್ಲಿ ‘ಉಚ್ಚಿಲ ದಸರಾ ಕೇಸರಿ’ ಹಾಗೂ ‘ಉಚ್ಚಿಲ ದಸರಾ ಕುಮಾರ್’ ಪ್ರಶಸ್ತಿ ವಿಭಾಗ ಹಾಗೂ ಮಹಿಳೆಯರ ವಿಭಾಗ ದಲ್ಲಿ ‘ಉಚ್ಚಿಲ ದಸರಾ ಕುವರಿ’ ಪ್ರಶಸ್ತಿಯನ್ನು ಹಾಗೂ ಎರಡು ವಿಭಾಗಗಳಲ್ಲಿ ಹಲವಾರು ದೇಹ ತೂಕದ ಮಾದರಿಯಲ್ಲಿ ಕುಸ್ತಿ ಸ್ಪರ್ಧೆ ಯನ್ನು ಆಯೋಜಿಸಲು ಉಚ್ಚಿಲ ದಸರಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಯಲ್ಲಿ ನಿರ್ಧರಿಸಲಾಗಿದೆ.
ಸ್ಪರ್ಧೆಯ ತೂಕದ ವಿವರಗಳು:
ಪುರುಷರ ವಿಭಾಗ:
34ರಿಂದ 38,41 ಕೆಜಿ,46 ಕೆಜಿ,50 ಕೆಜಿ,57 ಕೆಜಿ,61 ಕೆಜಿ,65 ಕೆಜಿ – ಉಚ್ಚಿಲ ಕುಮಾರ್
74 ಕೆಜಿ – ಉಚ್ಚಿಲ ದಸರಾ ಕೇಸರಿ
86 ಕೆಜಿ, 86 ಕೆಜಿಯಿಂದ 97 ಕೆಜಿ
ಮಹಿಳಾ ವಿಭಾಗ:
32 ರಿಂದ 36 ಕೆಜಿ,43 ಕೆಜಿ,46 ಕೆಜಿ,53 ಕೆಜಿ – ಉಚ್ಚಿಲ ದಸರಾ ಕುವರಿ
5982, 658 68 82, 68 8o 76 kg
ಉಡುಪಿ, ದ.ಕ. ಜಿಲ್ಲೆಯಲ್ಲಿ ಹುಟ್ಟಿದ ಕುಸ್ತಿ ಪಟುಗಳಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ದೇಹದ ತೂಕ ಮಾಡುವ ಸಮಯದಲ್ಲಿ ಪ್ರತಿ ಯೊಬ್ಬ ಕುಸ್ತಿ ಪಟು ತನ್ನ ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೈಜ್ ಫೊಟೋವನ್ನು ತರಬೇಕು. ಯಾವುದೇ ವಿಭಾಗ ಗಳಲ್ಲಿ 4 ಸ್ಪರ್ಧಾಳುಗಳು ಕಡಿಮೆ ಇದ್ದ ಪಕ್ಷದಲ್ಲಿ, ಆ ವಿಭಾಗದ ಕುಸ್ತಿ ಸ್ಪರ್ಧೆಯನ್ನು ರದ್ದು ಮಾಡಲಾಗುವುದು.
ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ದೇಹದ ತೂಕವನ್ನು ಅ.12ರಂದು ಮಧ್ಯಾಹ್ನ ಗಂಟೆ 2.30ರಿಂದ ಸಂಜೆ 6ರ ತನಕ ಮಾಡಲಾ ಗುವುದು. ಸಮಯ ಮೀರಿ ಬಂದಂತಹ ಸ್ಪರ್ಧಾಳುಗಳ ತೂಕವನ್ನು ಮಾಡಲಾಗುವುದಿಲ್ಲ. ವಿವರಗಳಿಗೆ ವಿಜಯ ಸುವರ್ಣ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…
ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ ಮಂಗಳೂರು: ಬದುಕಿನಲ್ಲಿ ಅನೇಕ ಏಳು…
ಉಡುಪಿ :ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ; ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಲು ಅ. 26 ಕೊನೆಯ ದಿನ ಉಡುಪಿ: ದೀಪಾವಳಿ…
ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ ಉಡುಪಿ…
ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಸಿಎಂ…
ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ ಮಣಿಪಾಲ: ಕಂಪೆನಿ ಕ್ಯು ಆರ್‌ಕೋಡ್ ಬಳಸದೆ ಮರ್ಚೆಂಟ್…