ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಲ್ಲೇ ಲಾಕ್ ಆಗಿ 140 ಕಿಮೀ ರೈಲಲ್ಲೇ ಅವರೆಲ್ಲ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು 36,000 ರೂ. ದಂಡ ವಿಧಿಸಿದ್ದಾರೆ.
ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರುವುದರಿಂದ 12 ಮಂದಿ 140 ಕಿಮೀ ರೈಲಲ್ಲೇ ಪ್ರಯಾಣಿಸಿದ್ದಾರೆ. ಬಳಿಕ ಅವರನ್ನೆಲ್ಲಾ ಎಟಾವಾ ಜಂಕ್ಷನ್‌ನಲ್ಲಿ ರೈಲಿನಿಂದ ಇಳಿಸಲಾಯಿತು. ಬಳಿಕ ಅಧಿಕಾರಿಗಳು ರೈಲು ಏರಿದ್ದ ಪ್ರತಿಯೊಬ್ಬರಿಗೂ ತಲಾ 3,000 ರೂ.ನಂತೆ 36,000 ರೂ. ದಂಡ ವಿಧಿಸಿರುತ್ತಾರೆ.
ವಾರಣಾಸಿಯಿಂದ ನವದೆಹಲಿ ಈ ವಂದೇ ಭಾರತ್ ರೈಲು ತೆರಳುತ್ತಿತ್ತು. ಈ ರೈಲಿಗೆ ಕಾನ್ಪುರದ ವಿವಿಧ ಭಾಗಗಳಿಂದ ಬಂದಿದ್ದ 12 ಮಂದಿ, ತಮ್ಮ ಸಂಬಂಧಿಕರನ್ನು ರೈಲಿಗೆ ಹತ್ತಿಸಲು, ರೈಲು ಪ್ರವೇಶಿಸಿದ್ದರು. ಈ ವೇಳೆ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡು ರೈಲು ಸಂಚಾರ ಆರಂಭಿಸಿತ್ತು.
ರೈಲು ಹೊರಡುತ್ತಿದ್ದಂತೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಕುಟುಂಬಸ್ಥರು ಹಾಗೂ ರೈಲು ಏರಿದ್ದವರು ಆತಂಕಕ್ಕೊಳಗಾಗಿದ್ದಾರೆ. ಅವರೆಲ್ಲಾ ಅವರೆಲ್ಲಾ ಸಿಬ್ಬಂದಿ ಬಳಿ ರೈಲಿನ ಬಾಗಿಲು ತೆಗೆಯುವಂತೆ ಮನವಿ ಮಾಡಿದ್ದಾರೆ. ಆದರೆ ರೈಲು ಚಲನೆಯಲ್ಲಿರುವಾಗ ಮತ್ತು ತಾಂತ್ರಿಕ ಕಾರಣಗಳಿಂದ ರೈಲಿನ ಬಾಗಿಲನ್ನು ಸಿಬ್ಬಂದಿ ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ನಿಯಂತ್ರಣ ಕೊಠಡಿಯಿಂದ ಬಂದ ಸೂಚನೆಯಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಎಟವಾ ಜಂಕ್ಷನ್‌ನಲ್ಲಿ ನಿಲ್ಲಿಸಲಾಯಿತು. ಬಳಿಕ 12 ಮಂದಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಟಿಕೆಟ್ ಪಡೆಯದೇ ರೈಲಿಗೆ ಪ್ರವೇಶಿಸಿದ ಮತ್ತು ರೈಲ್ವೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಎಲ್ಲರಿಗೂ ಸೇರಿ 36,000 ರೂ. ದಂಡ ವಿಧಿಸಲಾಯಿತು ಎಂದು ತಿಳಿದುಬಂದಿದೆ.
ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹20ರವರೆಗೆ ಕಡಿತ ಬೆಂಗಳೂರು: ಮಾರುಕಟ್ಟೆಯಲ್ಲಿ ಹೊಸ…
ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು ನವದೆಹಲಿ: ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ…
ಶಬರಿಮಲೆಯಲ್ಲಿ ಕ್ಯೂ ನಿಲ್ಲುವ ಅಗತ್ಯವಿಲ್ಲ : ಇನ್ಮುಂದೆ ಸ್ವಯಂಚಾಲಿತ ಯಂತ್ರದ ಮೂಲಕ ಸಿಗಲಿದೆ ಅರವಣ, ಅಪ್ಪಂ ಪ್ರಸಾದ ಶಬರಿಮಲೆ: ಅಯ್ಯಪ್ಪ…
ಮಣಿಪಾಲದಲ್ಲಿ ಬೈಕ್ ಕಳ್ಳತನ ಪ್ರಕರಣ: ಆರೋಪಿ ಬಂಧನ, ದ್ವಿಚಕ್ರ ವಾಹನ ವಶಕ್ಕೆ ಉಡುಪಿ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ…
ಮಂಗಳೂರು : ಬೋಲಾಸ್ ಘಟಕಕ್ಕೆ ಆರೋಗ್ಯ ಇಲಾಖೆ ದಾಳಿ ; 1,240 ಕೆ.ಜಿ. ನಕಲಿ ಅಡುಗೆ ಎಣ್ಣೆ ಜಪ್ತಿ ಮಂಗಳೂರು…
ರೈಲು ಪ್ರಯಾಣಿಕರ ಗಮನಕ್ಕೆ: ರೈಲ್ವೆ ಕಾಮಗಾರಿ ಹಿನ್ನಲೆ - ಪ್ರಮುಖ ರೈಲುಗಳ ಸಮಯ ಬದಲಾವಣೆ ಬೆಂಗಳೂರು:ರೈಲ್ವೆ ಕಾಮಗಾರಿ ಹಿನ್ನೆಲೆ ನೈರುತ್ಯ…