Featured

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ – ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ-2022 – Vishwanews24

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ- ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ-2022

ಮೈಸೂರು, ಮಂಗಳೂರು, ಮಡಿಕೇರಿ ದಸರಾ ಮಾದರಿಯಲ್ಲೇ ವೈಭವದ ನವರಾತ್ರಿ ಉತ್ಸವ

ನವದುರ್ಗೆಯರ ಪ್ರತಿಷ್ಠೆ, ಪ್ರತೀದಿನ ಚಂಡಿಕಾ ಹೋಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯ ಕ್ರಮ

65ಕ್ಕೂ ಹೆಚ್ಚಿನ ಟ್ಯಾಬ್ಲೋಗಳ ಜೊತೆ ಶೋಭಾಯಾತ್ರೆಯ ಮೆರುಗು..

ದಿನಂಪ್ರತಿ ಸಂಜೆ 6ರಿಂದ 8ರ ವರೆಗೆ ಸಾಂಸ್ಕೃತಿಕ ರಸದೌತಣ..

ಸೆ. 26ರಂದು ತೆರೆದ ಸಭಾಂಗಣ ಲೋಕಾರ್ಪಣೆ..

ಸೆ. 30ರಂದು 101 ವೀಣೆಗಳ ವಾದನ ಕಾರ್ಯಕ್ರಮ ಶತ ವೀಣಾವಲ್ಲರಿ

ಪಡುಬಿದ್ರಿ : “ಕರ್ನಾಟಕದ ಕೊಲ್ಹಾಪುರ’ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ. 26ರಿಂದ ಅ. 5ರ ವರೆಗೆ ಜರಗಲಿರುವ ನವರಾತ್ರಿ ಉತ್ಸವವನ್ನು “ಉಚ್ಚಿಲ ದಸರಾ ಉತ್ಸವ-2022’ವಾಗಿ ಆಚರಿಸಲು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ನಿರ್ಧರಿಸಿದೆ ಎಂದು ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೈಸೂರು, ಮಂಗಳೂರು, ಮಡಿಕೇರಿ ದಸರಾ ಮಾದರಿಯಲ್ಲೇ ವೈಭವದಿಂದ ಆಚರಿಸಲಾಗುವುದು. ಅದಕ್ಕಾಗಿ 3 ಕೋಟಿ ರೂ. ವ್ಯಯಿಸಲಾಗುವುದು. ನವದುರ್ಗೆಯರ ಪ್ರತಿಷ್ಠೆ, ಪ್ರತೀದಿನ ಚಂಡಿಕಾ ಹೋಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದೆ ಎಂದರು.

ಶೋಭಾಯಾತ್ರೆಯ ಮೆರುಗು
ಉಚ್ಚಿಲ – ಪಡುಬಿದ್ರಿ – ಹೆಜಮಾಡಿ ಟೋಲ್‌ಗೇಟ್‌ – ಪಡುಬಿದ್ರಿ – ಕೊಪ್ಪಲಂಗಡಿ ಕ್ರಾಸ್‌ ವರೆಗೆ (26 ಕಿ.ಮೀ.) ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ಹುಲಿವೇಷ, ಭಜನ ತಂಡಗಳು ಸಹಿತ 65ಕ್ಕೂ ಹೆಚ್ಚಿನ ಟ್ಯಾಬ್ಲೋಗಳಿರ ಲಿವೆ. ಕೊಪ್ಪಲಂಗಡಿಯಿಂದ ಕಾಪು ಬೀಚ್‌ ವರೆಗಿನ 4 ಕಿ.ಮೀ. ನಡಿಗೆ ಬಳಿಕ ಕಾಶಿಯ ಗಂಗಾರತಿ ಮಾದರಿಯಲ್ಲೇ 10 ಬೃಹತ್‌ ಗಂಗಾರತಿ, ಮಹಾ ಮಂಗಳಾರತಿ ನಡೆಯಲಿದೆ. ದೋಣಿಗಳಲ್ಲಿ ಶಾರದಾ ಮಾತೆ, ನವದುರ್ಗೆಯರ ಪ್ರತಿಮೆಗಳನ್ನು ಒಯ್ದು ಸಮುದ್ರದಲ್ಲಿ ವಿಸರ್ಜಿಸ ಲಾಗುವುದು ಎಂದರು.

ಇದನ್ನೂ ಓದಿ: ದುಡುಕದೆ ನಿರ್ಣಯವನ್ನು ತೆಗೆದುಕೊಳ್ಳಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಸಾಂಸ್ಕೃತಿಕ ರಸದೌತಣ
ದಿನಂಪ್ರತಿ ಸಂಜೆ 6ರಿಂದ 8ರ ವರೆಗೆ ಮಂಗಳೂರು ಕದ್ರಿಯ ನೃತ್ಯ ಭಾರತಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 5ರಂದು ಶೋಭಾಯಾತ್ರೆ ಸಾಗುವ ವೇಳೆ ಹೆಜಮಾಡಿ, ಪಡುಬಿದ್ರಿ, ಉಚ್ಚಿಲ, ಕೊಪ್ಪಲಂಗಡಿ, ಕಾಪು ಬೀಚ್‌ ಸಹಿತ ವಿವಿಧೆಡೆ ಸಂಗೀತ ರಸಮಂಜರಿ, ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಸ್ಕಾನ್‌ ಮೂಲಕ ವಿಶೇಷ ಪ್ರಸಾದದ ವ್ಯವಸ್ಥೆಯನ್ನೂ ಮಾಡ ಲಾಗಿದೆ. ನವರಾತ್ರಿ ವೇಳೆ ಶ್ರೀ ಕ್ಷೇತ್ರಕ್ಕೆ 5 ಲಕ್ಷಕ್ಕೂ ಅಧಿಕ ಭಕ್ತರು ಸಂದರ್ಶಿಸಲಿದ್ದಾರೆ. ದಿನಂಪ್ರತಿ 20 ಸಾವಿರ ಭಕ್ತರಿಗೆ ಅನ್ನದಾಸೋಹ ನಡೆಯಲಿದೆ ಎಂದರು.

ತೆರೆದ ಸಭಾಂಗಣ ಲೋಕಾರ್ಪಣೆ
ದೇವಸ್ಥಾನದ ಪಕ್ಕದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ  ಗೊಂಡಿ ರುವ “ಶ್ರೀಮತಿ ಶಾಲಿನಿ, ಡಾ| ಜಿ. ಶಂಕರ್‌ ತೆರೆದ ಸಭಾಂಗಣ’ದ ಲೋಕಾರ್ಪಣೆ ಸೆ. 26ರಂದು ನಡೆಯಲಿದ್ದು, ಅಲ್ಲಿಯೇ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯ ಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ ಹೇಳಿದರು.

ಇದನ್ನೂ ಓದಿ: ಮಲ್ಪೆ : ಸಣ್ಣ ನಾಡದೋಣಿ ಬಲೆಗೆ ಬಿದ್ದ ಮಿಲ್ಕ್ ತಾಟೆ ಮೀನುಗಳು..ಕೆ.ಜಿ.ಗೆ 280 ರೂ.ಗಳಂತೆ ಹರಾಜು – Vishwanews24

ಶತ ವೀಣಾವಲ್ಲರಿ
ಸೆ. 30ರ ಲಲಿತಾ ಪಂಚಮಿಯಂದು ಸಂಜೆ 4ರಿಂದ 5ರ ವರೆಗೆ ವಿ| ಪವನ್‌ ಬಿ. ಆಚಾರ್‌ ಬಳಗದವರಿಂದ 101 ವೀಣೆಗಳ ವಾದನ ಕಾರ್ಯಕ್ರಮ “ಶತ ವೀಣಾವಲ್ಲರಿ’ ನಡೆಯಲಿದೆ.
ಶೋಭಾಯಾತ್ರೆ ಸಾಗುವ ಮಾರ್ಗದ ಎಲ್ಲ ಅಂಗಡಿ, ಮಳಿಗೆ, ಮನೆಯವರು ವಿದ್ಯುತ್‌ ದೀಪಾಲಂಕಾರ ಮಾಡಿ ದಸರಾವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಡಾ| ಶಂಕರ್‌ ವಿನಂತಿಸಿದರು.

ಉಚ್ಚಿಲ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್‌, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್‌, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್‌, ದ.ಕ. ಮಹಿಳಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಇದನ್ನೂ ಓದಿ: ಒಂದೇ ಸಮಯದಲ್ಲಿ 2 ಕಂಪನಿಗಳಲ್ಲಿ ಕೆಲಸ.. ವಿಪ್ರೋ ಕಂಪನಿಯ 300 ಸಿಬ್ಬಂದಿಗಳ ವಜಾ :ಅಧ್ಯಕ್ಷ ರಿಶದ್‌ ಪ್ರೇಮ್‌ಜೀ – Vishwanews24

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago