ಉಚ್ವಿಲ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಓಮ್ನಿ ಡಿಕ್ಕಿ – ಸ್ಥಳದಲ್ಲೇ ಮೃತ್ಯು – vishwanews24

Featured, ಉಡುಪಿ

ಉಚ್ವಿಲ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಓಮ್ನಿ ಡಿಕ್ಕಿ – ಸ್ಥಳದಲ್ಲೇ ಮೃತ್ಯು

ಉಚ್ವಿಲ :  ರಸ್ತೆ ದಾಟುತ್ತಿದ್ದ ವ್ಯಕ್ತಿಯೊರ್ವರಿಗೆ ಓಮ್ನಿ ಕಾರು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿಯ ಉಚ್ವಿಲ ಪೇಟೆ ಬಳಿ ಭಾನುವಾರ ನಡೆದಿದೆ.

ಉಚ್ವಿಲ ಸುಭಾಸ್ ರಸ್ತೆ ನಿವಾಸಿ ಜನಾರ್ದನ್ ಕೋಟ್ಯಾನ್ (66) ಮೃತ ವ್ಯಕ್ತಿಪಟ್ಟ ವ್ಯಕ್ತಿ.

ಇವರು ಈ ಹಿಂದೆ ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದು, ಸಂಜೆ ಪೇಟೆಗೆ ಬಂದಿದ್ದು ರಸ್ತೆ ದಾಟುತ್ತಿದಂತೆ ಅಜಾಗರೂಕತೆಯಿಂದ ಮುನ್ನುಗ್ಗಿ ಬಂದ ಉಚ್ಚಿಲ ಪೊಲ್ಯ ನಿವಾಸಿಯ ಓಮ್ನಿ ಕಾರು ಡಿಕ್ಕಿಯಾಗಿದೆ.

ಕಾರು ಜನಾರ್ದನ್ ಕೋಟ್ಯಾನ್ ರನ್ನು ಸುಮಾರು ಐವತ್ತು ಮೀಟರ್ ಎಳೆದುಕೊಂಡು ಹೋಗಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply