“ಉಡುಪಿಯನ್ನು ನಂ. 1 ಕ್ಷೇತ್ರವನ್ನಾಗಿ ಮಾಡಲು ಆಶೀರ್ವಾದ ನೀಡಿ ; ಪ್ರಮೋದ್‌ ಮಧ್ವರಾಜ್‌

Featured, ಉಡುಪಿ

ಉಡುಪಿ : ಎರಡು ಸಾವಿರ ಕೋ. ರೂ. ಅಧಿಕ ಅನುದಾನ  ತರಿಸಿ ಅಭಿವೃದ್ಧಿ ಕಾರ್ಯ  ಕೈಗೊಂಡು ಉಡುಪಿ ವಿಧಾನಸಭಾ ಕೇÒತ್ರವನ್ನು ಕರ್ನಾಟಕದ ನಂ. 1 ಕ್ಷೇತ್ರವನ್ನಾಗಿ ಮಾಡಲಾಗಿದೆ. ಮುಂದಿನ 5 ವರ್ಷ ಅವಕಾಶ ನೀಡಿದರೆ ಭಾರತ ದೇಶದಲ್ಲೆ ಉಡುಪಿಯನ್ನು ಮಾದರಿ ಕ್ಷೇತ್ರವಾಗಿ ಮಾಡುವ ಆಸೆ ಇದೆ. ನನ್ನ ಈ ಆಸೆ ಈಡೇರಿಸಲು ತಾವು ಆಶೀರ್ವಾದ ಮಾಡಬೇಕು ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

ಕಡೆಕಾರಿನಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ  ಅವರು ಮಾತನಾಡಿದರು. ಗ್ರಾಮಾಂತರ ಮತ್ತು ನಗರ ಪ್ರದೇಶಕ್ಕೆ ಒಟ್ಟು  55 ಸರಕಾರಿ ಬಸ್‌ಗಳನ್ನು ತರಿಸಿದ್ದೇನೆ.  ನನ್ನ  ಕ್ಷೇತ್ರದ, ನನ್ನ ಜಿಲ್ಲೆಯ ಜನತೆಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ  ಖಾಸಗಿ ಬಸ್‌ ಮಾಲಕರ  ವಿರೋಧದ ನಡುವೆಯೂ ಸರಕಾರಿ ಬಸ್ಸನ್ನು ತರಿಸುವ ವ್ಯವಸ್ಥೆ  ಮಾಡಿದ್ದೇನೆ ಎಂದರು.

ಕಾಂಗ್ರೆಸ್‌ ನಾಯಕರಾದ ಅಮೃತ್‌ ಶೆಣೈ, ಮೀನಾಕ್ಷಿ ಮಾಧ‌ವ, ಯುವರಾಜ್‌, ಗಣೇಶ್‌ ನೆರ್ಗಿ, ದಿವಾಕರ ಕುಂದರ್‌, ಜನಾರ್ದನ ಭಂಡರ್‌ಕಾರ್‌, ನವೀನ್‌ ಕನ್ನರ್ಪಾಡಿ, ಸತೀಶ್‌ ಅಮೀನ್‌ ಪಡುಕರೆ, ತಾರಾನಾಥ್‌ ಸುವರ್ಣ  ಉಪಸ್ಥಿತರಿದ್ದರು.