ಉಡುಪಿಯಲ್ಲಿ ಕೈಮಗ್ಗ ಸೀರೆಗಳ ಉತ್ಸವದ ಪೂರ್ವಭಾವಿ ಪತ್ರಿಕಾಗೋಷ್ಠಿ :vishwanews24
ಉಡುಪಿಯಲ್ಲಿ ಕೈಮಗ್ಗ ಸೀರೆಗಳ ಉತ್ಸವದ ಪೂರ್ವಭಾವಿ ಪತ್ರಿಕಾಗೋಷ್ಠಿ :vishwanews24
ಉಡುಪಿ:ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಸಮುದಾಯಗಳ ಒಕ್ಕೂಟ ಬೆಂಗಳೂರು, ಉಡುಪಿ, ತಾಳಿಪಾಡಿ ಶಿವಳ್ಳಿ ಪಡುಪಣಂಬೂರು, ಬ್ರಹ್ಮಾವರ ಮಂಗಳೂರು ಬಸ್ರೂರು,ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಕೈ ಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮ ಅಗಸ್ಟ್ 5-6-7 ರಂದು ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿಯ ಅಧ್ಯಕ್ಷರಾದ ರತ್ನಾಕರ ಇಂದ್ರಾಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೈ ಮಗ್ಗದ ಸೀರೆಯನ್ನು ಉಳಿಸಬೇಕೆಂಬ ದೃಷ್ಟಿಯಿಂದ ಹೊಸ ತಲೆಮಾರುಗಳಿಗೆ ತರಬೇತಿಯನ್ನು ನೀಡುವ ಕೆಲಸ ಮಾಡುತ್ತಿದೆ ಮತ್ತು ಉಡುಪಿ ಸೀರೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸುವ ಇರಾದೆಯನ್ನಿಟ್ಟುಕೊಂಡು ಈ ಉತ್ಸವ ನಡೆಯಲಿದೆ ಎಂದರು.
ಕೈ ಮಗ್ಗದ ನೇಯ್ಗೆ ಅಂದು ಇಂದು ಮುಂದು ವಿಚಾರ ಸಂಕಿರಣ ಕಾರ್ಯಕ್ರಮ ನೇಕಾರಿಕೆಯ ಭವಿಷ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಚಿಂತನಮಂಥನ ನಡೆಯಲಿದ್ದು ಅದರ ಜತೆಗೆ ಸಾರ್ವಜನಿಕರಿಗಾಗಿ ಉಡುಪಿ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆಯಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಮಣಿಪಾಲ,ಜ್ಯೋತಿ ಪ್ರಸಾದ್ ಶೆಟ್ಟಿಗಾರ್,ದಿನೇಶ್ ಕುಮಾರ್,ಹರೀಶ್ ಶೆಟ್ಟಿಗಾರ್ ಏರ್ಮಾಳು,ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ,ನರೇಂದ್ರ ಶೆಟ್ಟಿಗಾರ ಹೆರ್ಗ ಮೊದಲಾದವರು ಉಪಸ್ಥಿತರಿದ್ದರು.
