Featured

ಉಡುಪಿಯಲ್ಲಿ ಸ್ವಪಕ್ಷದಿಂದಲೇ ಸಚಿವೆ ಜಯಮಾಲಾ ಗೆ ತೀವ್ರ ಮುಖಭಂಗ ;ಕಾರ್ಯಕರ್ತರ ವಿರುದ್ಧವೇ ಗರಂ..

ಉಡುಪಿ: ಜಯಮಾಲಾಗೆ ಸ್ವಪಕ್ಷೀಯರಿಂದಲೇ ಇರಿಸು ಮುರಿಸಾದ ಘಟನೆ ಮಂಗಳವಾರ ಮಧ್ಯಾಹ್ನ ವೇಳೆ ಉಡುಪಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 150ನೇ ವರ್ಷದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನಡೆದಿದೆ.

ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಸಚಿವೆ ಜಯಮಾಲಾಗೆ ಕಾಂಗ್ರೆಸ್ ಕಚೇರಿಯಲ್ಲಿ ಮುತ್ತಿಗೆ ಹಾಕಿದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಭಾರತ್ ಬಂದ್ ವೇಳೆ ನಡೆದ ಗಲಭೆ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಭಾರತ್ ಬಂದ್ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಗಿದ್ದ ಲಾಠಿಚಾರ್ಜ್ ಬಗ್ಗೆ ಸಚಿವೆ ಜಯಾಮಾಲ ಪ್ರಶ್ನಿಸದೇ ಇರುವುದನ್ನು ತರಾಟಕ್ಕೆ ತೆಗೆದುಕೊಂಡ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದಲ್ಲದೆ ಹಿಗ್ಗಾ ಮುಗ್ಗ ಥಳಿಸಿದ ಎಸ್. ಪಿ ಮನೆಗೆ ಗಣಪತಿ ಹಬ್ಬದಂದು ಜಯಾಮಾಲ ಭೇಟಿ ನೀಡಿದನ್ನು ಪ್ರಶ್ನಿಸಿ ಅಕ್ರೋಶವನ್ನು ಹೊರ ಹಾಕಿದರು. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಎತ್ತಂಗಡಿಗೆ ಒತ್ತಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸೂಕ್ತ ನಡವಳಿಕೆ ತೆಗೆದುಕೊಳ್ಳಬೇಕೆಂದು ಸಚಿವೆ ಯಲ್ಲಿ ಮನವಿ ಮಾಡಿದರು. .

ಭಾರತ್ ಬಂದ್ ಸಂದರ್ಭ ನಡೆದ ಗಲಾಟೆಯಲ್ಲಿ ಸ್ವತಃ ಪೊಲೀಸ್ ವರಿಷ್ಠಾಧಿಕಾರಿಯೇ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಜಿಲ್ಲೆಯ ಉಸ್ತುವಾರಿ ಸಚಿವೆ ಆಗಿರುವ ಜಯಮಾಲಾ ಲಾಠಿಚಾರ್ಜ್ ಆದಾಗ ಕಾಂಗ್ರೆಸ್ ಕಾರ್ಯಕರ್ತರ ಕಷ್ಟಗಳಿಗೆ, ನೋವುಗಳಿಗೆ ಯಾವುದೇ ರೀತಿಯಲ್ಲಿ ಸ್ವಂದಿಸಿಲ್ಲ. ಕಾರ್ಯಕರ್ತರು ಆಸ್ಪತ್ರೆ ಗೆ ದಾಖಲಾದರೂ ಅವರ ಆರೋಗ್ಯ ವಿಚಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಕಷ್ಟಗಳಿಗೆ ಸ್ಪಂದಿಸದ ನೀವು ಗಣೇಶ ಹಬ್ಬದಂದು ಎಸ್ ಪಿ ಮನೆಗೆ ಊಟ ಮಾಡಲು ಹೋಗಿದ್ದಿರಿ ಎಂದು ಜಯಮಾಲ ವಿರುದ್ದ ಕಾರ್ಯಕರ್ತರು ಆರೋಪಗಳ ಸುರಿಮಳೆಗೈದರು. ಸ್ವಪಕ್ಷೀಯರಿಂದಲೇ ಘೇರಾವ್ ಹಾಕಿಸಿಕೊಂಡ ಸಚಿವೆ ಜಯಮಾಲಗ ತೀವ್ರ ಮುಜುಗರಕ್ಕೆ ಒಳಗಾಗಿ ಕಾರ್ಯಕರ್ತರ ಆಕ್ರೋಶಕ್ಕೆ ಸಮಜಾಯಿಷಿ ನೀಡಲು ಮುಂದಾದರು. ಆದರೆ ಸಚಿವೆಯ ಮಾತಿಗೆ ತಣ್ಣಗಾಗದೆ ಕಾರ್ಯಕರ್ತರು ವಾಗ್ವಾದ ಮುಂದುವರಿಸಿದರು.

ಸಚಿವೆ ಜಯಮಾಲಾರಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವೆ ಖಡಕ್ ಸೂಚನೆ ನೀಡಿ ಕಾಲ್ಕಿತ್ತರು. ಈ ವೇಳೆ ಜಯಮಾಲಾ ಅವರು ಮಾಧ್ಯಮ ಮುಂದಿಟ್ಟುಕೊಂಡು ಹೆದರಿಸಲು ಬರಬೇಡಿ ಎಂದು ಎಚ್ಚರಿಕೆ ನೀಡಿದರು. ನನಗೆ ತುಂಬಾ ಕೋಪ ಬರುತ್ತೆ ಎಂದು ಕಾರು ಹತ್ತಿ ಸಚಿವೆ ಕಾಲ್ಕಿತ್ತರು.

Vishwa News 24

Recent Posts

ಬಿಜೆಪಿ ಬಡ, ಮಧ್ಯಮ ವರ್ಗದವರ ಬದುಕನ್ನು ದುರ್ಬಲ ಮಾಡಲು ಹೊರಟಿದೆ : ಈಶ್ವರ್ ಖಂಡ್ರೆ – vishwanews24

ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…

2 hours ago

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು – vishwanews24

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…

2 hours ago

ಕೌಟುಂಬಿಕ ಕಲಹ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ  – vishwanews24

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…

3 hours ago

ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. !! – vishwanews24

NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್‌ ಫೋನ್‌…

3 hours ago

ಪಿಕಲ್‌ಬಾಲ್‌ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಟೆಕ್ಸಾಸ್‌ನಲ್ಲಿ ಪತನ :  ಐವರು ಮೃತ್ಯು – vishwanews24

ಪಿಕಲ್‌ಬಾಲ್‌ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಟೆಕ್ಸಾಸ್‌ನಲ್ಲಿ ಪತನ :  ಐವರು ಮೃತ್ಯು ಆಸ್ಟಿನ್: ವಿಂಬರ್ಲಿ ಬಳಿ ಪಿಕಲ್‌ಬಾಲ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ…

4 hours ago

ನಟ ಡಾಲಿ ಧನಂಜಯ್ ಧನ್ಯತಾ ದಂಪತಿಗೆ ಗಂಡು ಮಗು ಜನನ – vishwanews24

ನಟ ಡಾಲಿ ಧನಂಜಯ್ ಧನ್ಯತಾ ದಂಪತಿಗೆ ಗಂಡು ಮಗು ಜನನ ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ದಂಪತಿಗೆ…

4 hours ago